spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಣಿಬೆನ್ನೂರು- ಶಿಕಾರಿಪುರ ರೈಲ್ವೆಮಾರ್ಗ ನಿರ್ಮಾಣ: ರೈಲ್ವೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

- Advertisement -Nitte

ಹೊಸ ದಿಗಂತ ವರದಿ, ಶಿವಮೊಗ್ಗ:  

ರಾಣಿಬೆನ್ನೂರು- ಶಿಕಾರಿಪುರ ರೈಲ್ವೆಮಾರ್ಗ ನಿರ್ಮಾಣ ಸಂಬಂಧ ರೈಲ್ವೆ ಅಧಿಕಾರಿಗಳು ತಂಡವು  – ರಾಣಿಬೆನ್ನೂರಿನಿಂದ ಶಿಕಾರಿಪುರ – ಶಿವಮೊಗ್ಗವರೆಗೆ ನೂತನ ಮಾರ್ಗದಲ್ಲಿ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಯೋಜನೆಗೆ ಬೇಕಾದ ಮಾಹಿತಿ, ಭೂ ಸ್ವಾಧೀನ ಮತ್ತು ಸ್ಥಳೀಯ ಸಮಸ್ಯೆಗಳ  ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.  ಶೀಘ್ರ ರೈಲ್ವೆ ಸಮಸ್ಯೆ ಪರಿಹರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು  ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಮೊದಲನೇ ಹಂತದ ಕಾಮಗಾರಿಯನ್ನ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ವಿಮಾನ ನಿಲ್ದಾಣ ಚರ್ಚೆ…
ಶಿವಮೊಗ್ಗದ  ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ತಾಂತ್ರಿಕ ವಿಷಯಗಳ ಬಗ್ಗೆ  ರೈಟ್ಸ್ ಅಧಿಕಾರಿಗಳು ರಾಘವೇಂದ್ರ ಜೊತೆಗೆ ಚರ್ಚೆ ನಡೆಸಿದರು.
ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಈ ವೇಳೆ ಸಂಸದರು ಸೂಚಿಸಿದರು.
ಈ  ಸಂದರ್ಭದಲ್ಲಿ  ರೈಟ್ಸ್ ಸಂಸ್ಥೆ ಅಧಿಕಾರಿಗಳಾದ  ಹರಿ ಬಾಬು, ಐಆರ್ಎಸ್ಈ  ಜೆನರಲ್ ಮ್ಯಾನೇಜರ್
ಎಂ. ಜಿ. ಸುದೀಪ್, ಸೀನಿಯರ್ ಡಿ. ಜಿ. ಎಂ. ಶ್ರೀನಿವಾಸ್ಎಂ , ಎಂ. ರಾಜು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss