ಶಾರುಖ್‌, ಸಲ್ಮಾನ್‌ ಖಾನ್‌ ಮನೆ ಪಕ್ಕದಲ್ಲೇ 4ಅಂತಸ್ತಿನ ಕಟ್ಟಡ ಕೊಂಡ ರಣವೀರ್‌, ಡಿಪ್ಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಜೋಡಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವ ಈ ಜೋಡಿಗೆ ಆಸ್ತಿ ಕೂಡ ಏನು ಕಮ್ಮಿಯಿಲ್ಲ. ಇತ್ತೀಚೆಗೆ ನಡೆಸಿದ ಸಮೀಕ್ಷೆವೊಂದರ ಪ್ರಕಾರ ರಣವೀರ್ ದೀಪಿಕಾ ಭಾರತದ ಶ್ರೀಮಂತ ದಂಪತಿಯಲ್ಲಿ ಒಬ್ಬರು. ಇದೀಗ ಇವರ ಆಸ್ತಿಗೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ವೈರಲ್ ಆಗಿದೆ. ಮುಂಬೈನ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾದ ಬಾಂದ್ರಾದಲ್ಲಿ ಇಬ್ಬರೂ ದುಬಾರಿ ಅಪಾರ್ಟ್ಮೆಂಟ್‌ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್ ಖಾನ್ ಅವರ ಜನಪ್ರಿಯ ಬಂಗಲೆ ಮನ್ನತ್ ಮತ್ತು ಸಲ್ಮಾನ್ ಖಾನ್ ಅವರ ಮನೆ ಕೂಡ ಅಪಾರ್ಟ್‌ಮೆಂಟ್ ಖರೀದಿಸಿದ‌ ಸ್ಥಳದಲ್ಲಿಯೇ ಇವೆ.  16, 17, 18, 19 ಒಟ್ಟು ನಾಲ್ಕು ಮಹಡಿಗಳನ್ನು ಖರೀದಿಸಲಾಗಿದೆಯಂತೆ. ಬಾಲಿವುಡ್ ಮಾಧ್ಯಮಗಳ ಪ್ರಕಾರ, ಅವುಗಳ ಮೌಲ್ಯ ಅಂದಾಜು 119 ಕೋಟಿ ರೂಪಾಯಿ ಎನ್ನಲಾಗಿದೆ.

ರಣವೀರ್ ಮತ್ತು ದೀಪಿಕಾ ಶೀಘ್ರದಲ್ಲೇ ಈ ಅಪಾರ್ಟ್‌ಮೆಂಟ್‌ಗೆ ತೆರಳಲಿದ್ದಾರೆ ಎಂಬ ಸುದ್ದಿ ಕೂಡಾ ಇದೆ. ಇಷ್ಟು ದೊಡ್ಡ ಮೊತ್ತದ ಮನೆ ಖರೀದಿ ಮಾಡಿದ್ದಾರೆ ಎಂದರೆ ಚೆನ್ನಾಗೇ ಸಂಪಾದನೆ ಮಾಡ್ತಿದಾರೆ ಅಂತಿದಾರೆ ಪ್ರೇಕ್ಷಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!