Tuesday, June 28, 2022

Latest Posts

ರಣವೀರ್ ಸಿಂಗ್ ಸಿನಿಮಾಕ್ಕೂ ಪೈರಸಿ ಕಾಟ: ಚಿತ್ರ 83 ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸೋರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊದಲ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸಾಧನೆ ಆಧರಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ 83 ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸೋರಿಕೆಯಾಗಿದೆ.
ಪೈರಸಿ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ, 83 ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಇದರಿಂದ ಪ್ರೇಕ್ಷಕರಿಗೆ ನಿರಾಸೆ ಮೂಡಿದೆ.
1983ರ ವಿಶ್ವಕಪ್ ವೇಳೆ ನಡೆದ ಕಪಿಲ್ ದೇವ್ ಆಟ ಆ ಕ್ಷಣದ ಕೆಲವು ನೈಜ ಘಟನೆ ಆಧರಿಸಿ ಸಿನಿಮಾ ನಿರ್ಮಾಣವಾಗಿದೆ.
ಚಿತ್ರಪ್ರೇಮಿಗಳು ಮತ್ತು ವಿಮರ್ಶಕರು 83 ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದರೆ ಇತ್ತ ವಿವಿಧ ವೆಬ್​ಸೈಟ್ ಹಾಗೂ ಟೆಲಿಗ್ರಾಮ್​ಗಳಲ್ಲಿ ಮತ್ತು ಟೋರೆಂಟ್​ಗಳಲ್ಲಿ ಚಿತ್ರ ಸೋರಿಕೆಯಾಗಿದೆ. ಇದರಿಂದ ಸಿನಿಮಾ ಗಲ್ಲಿಪೆಟ್ಟಿಗೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss