ಅತ್ಯಾಚಾರದ ಆರೋಪ: ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿಯಲ್ಲಿ ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯಾದೊಂದಿಗೆ ಕೊನೆಯ ಗ್ರುಪ್‌ ಮ್ಯಾಚ್‌ ಆಡಿದ ಬಳಿಕ ಶ್ರೀಲಂಕಾ ತಂಡವು ಗುಣತಿಲಕರನ್ನು ತೊರೆದು ವಾಪಸ್ಸಾಗಿದೆ.

“ಅತ್ಯಾಚಾರ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿಯಲ್ಲಿ ಬಂಧಿಸಲಾಗಿದೆ, ತಂಡವು ಅವರಿಲ್ಲದೆ ಆಸ್ಟ್ರೇಲಿಯಾವನ್ನು ತೊರೆದಿದೆ ಎಂದು ತಂಡದ ಮೂಲಗಳು ತಿಳಿಸಿವೆ” ಎಂದು ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

31 ವರ್ಷದ ಅವರು ಮೊಣಕಾಲು ಗಾಯದ ಕಾರಣ ಮೊದಲ ಸುತ್ತಿನಲ್ಲಿ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಪೊಲೀಸ್ ತನಿಖೆಯ ನಂತರ ಸಿಡ್ನಿಯ ಟೀಮ್ ಹೋಟೆಲ್‌ನಿಂದ ಭಾನುವಾರ ಮುಂಜಾನೆ ಗುಣತಿಲಕರನ್ನು ಬಂಧಿಸಲಾಗಿದೆ.

“ಆನ್‌ಲೈನ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಮಹಿಳೆ ಹಲವಾರು ದಿನಗಳವರೆಗೆ ಪುರುಷನೊಂದಿಗೆ ಸಂವಹನ ನಡೆಸಿದ ನಂತರ ಅವನನ್ನು ಭೇಟಿಯಾದಳು; ನಂತರ ಅವನು 2 ನವೆಂಬರ್ 2022 ರ ಸಂಜೆ ಬುಧವಾರ ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆಯು ಉಲ್ಲೇಖಿಸಿದೆ ಎಂದು ಮೂಲಗಳು ವರದಿ ಮಾಡಿವೆ.‌

“ತನಿಖೆಗಳ ಭಾಗವಾಗಿ, ನಿನ್ನೆ ರೋಸ್ ಬೇ ವಿಳಾಸದಲ್ಲಿ ತಜ್ಞ ಪೊಲೀಸರು ಅಪರಾಧ ದೃಶ್ಯ ಪರೀಕ್ಷೆಯನ್ನು ಕೈಗೊಂಡರು. ಹೆಚ್ಚಿನ ವಿಚಾರಣೆಯ ನಂತರ, 31 ವರ್ಷದ ಕ್ರಿಕೆಟಿಗನನ್ನು ಇಂದು ಮುಂಜಾನೆ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!