ಹೊಸದಿಗಂತ ವರದಿ, ಹಾಸನ :
ನಾಲ್ಕು ತಿಂಗಳ ಹಿಂದೆ ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆಗೆ ಡ್ರಾಪ್ ಕೊಡುತ್ತೇನೆ ಎಂದು ನೆಪಹೇಳಿ ಅತ್ಯಾಚಾರವೆಸಗಿರುವ ಪ್ರಕರಣವೊಂದು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಆರ್‌ಎಂಸಿಯಲ್ಲಿ ಶುಂಠಿ ವಾಷಿಂಗ್ ಕೆಲಸ ಮಾಡಿಕೊಂಡಿದ್ದರು. ಸೆ. 30 ರಂದು ಆರ್‌ಎಂಸಿಗೆ ಕೆಲಸಕ್ಕೆಂದು ತೆರಳಲು ವಾಹನ ಕಾಯುತ್ತಿದ್ದ ವೇಳೆ ಮಹಿಳೆ ನಿಂತಿದ್ದನ್ನು ಗಮನಿಸಿ KA-46-K-3363 ನಂಬರ್ ಪಲ್ಸರ್ ಬೈಕ್‌ನಲ್ಲಿ ಬಂದ ಜೆ.ಸುರಪುರ ಗ್ರಾಮದ ಕೇಶವಮೂರ್ತಿ ನಾನು ಆರ್‌ಎಂಸಿಗೆ ಹೋಗುತ್ತಿದ್ದೇನೆ ಎಂದು ಮಹಿಳೆಯನ್ನು ಪುಸಲಾಯಿಸಿ ಬೈಕ್‌ನಲ್ಲಿ ಕೂರಿಸಿಕೊಂಡಿದ್ದಾನೆ. ನಂತರ ಆರೋಪಿ ಕೇಶವಮೂರ್ತಿ ಅಸ್ಸಾಂ ಮೂಲದ ಮಹಿಳೆಯನ್ನು ಆರ್‌ಎಂಸಿ ಬಳಿ ಬೈಕ್ ನಿಲ್ಲಿಸದೆ ಜೋಳದ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಈ ಘಟನೆ ತಾಲ್ಲೂಕಿನ ಜೆ.ಸುರಪುರ ಬಳಿ ಘಟನೆ ನಡೆದಿದೆ ಎಂದು ಬೇಲೂರು ಪೊಲೀಸ್ ಠಾಣೆಗೆ ಅಸ್ಸಾಂ ಮೂಲದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆಯು ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಇದೀಗ ಬೇಲೂರು ಪೋಲಿಸರು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.