Sunday, August 14, 2022

Latest Posts

ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಅತ್ಯಾಚಾರ: ಪ್ರತ್ಯಕ್ಷದರ್ಶಿಗಳಿಂದ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

14 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗುವಾಗ ಪ್ರತ್ಯಕ್ಷ ದರ್ಶಿಗಳಿಂದ ನೇರವಾಗಿ ಸಿಕ್ಕಿ ಬಿದ್ದಿದ್ದ ಮಹಿಳೆ ಈಗ ಗರ್ಭಿಣಿಯಾಗಿದ್ದಾಳೆ.

ಹೌದು.. ನ್ಯೂಯಾರ್ಕ್’ನ ಅರ್ಕಾನಸ್​ನ ಪರಗೌಲ್ಡ್​ ನಿವಾಸಿಯಾಗಿರುವ ಬ್ರಿಟ್ನಿ ಗ್ರೇ (23) 2020ರ ಸೆಪ್ಟೆಂಬರ್​ನಲ್ಲಿ 14 ವರ್ಷದ ಬಾಲಕನ ಮೇಲೆ ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಳು. ಕೃತ್ಯ ಎಸಗುವಾಗ ಪ್ರತ್ಯಕ್ಷ ದರ್ಶಿಗಳಿಂದ ನೇರವಾಗಿ ಸಿಕ್ಕಿ ಬಿದ್ದಿದ್ದಳು.

ನಂತರ ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಗ್ರೇ ವಿರುದ್ಧ ಪೊಲೀಸರ ಎದುರು ಹೇಳಿಕೆ ನೀಡಿದ್ದರು. ಇದೀಗ ಗ್ರೇ ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ. ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಇದು ದೃಢಪಟ್ಟಿದೆ.

ಬಾಲಕ ಹಾಗೂ ಗ್ರೇ ನಡುವೆ ಒಂದು ವರ್ಷದಿಂದ ದೈಹಿಕ ಸಂಬಂಧವಿದೆ ಎಂದು ಪ್ರತ್ಯಕ್ಷದರ್ಶಿಗಳು  ಆರೋಪಿಸಿದ್ದಾರೆ. ಪ್ರಕರಣ ನಡೆದ ಒಂದು ವರ್ಷದ ಬಳಿಕ ಗ್ರೇ ಗರ್ಭಿಣಿಯಾದ ಬೆನ್ನಲ್ಲೇ ಈ ವಿಚಾರ ಭಾರಿ ಸುದ್ದಿಯಾಗಿದೆ. ಗ್ರೇ ಗರ್ಭಿಣಿಯಾಗಿರುವುದು ಪೊಲೀಸರು ನೀಡಿರುವ ವರದಿಯಲ್ಲೂ ಸಹ ಖಚಿತವಾಗಿದೆ.

ಮಾರ್ಚ್ 1 ರಂದು ಗ್ರೇ ಬಂಧಿಸಲಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆಕೆ ಏಪ್ರಿಲ್​ 23ಕ್ಕೆ ಕೋರ್ಟ್​ ಮುಂದೆ ಹಾಜರಾಗಬೇಕಿದೆ. ಸದ್ಯ ವಿಚಾರಣೆ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss