Sunday, August 14, 2022

Latest Posts

ಅಪ್ರಾಪ್ತೆ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೀವಾವಧಿ ಶಿಕ್ಷೆ, 60 ಸಾವಿರ ರೂ. ದಂಡ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸದಿಗಂತ ವರದಿ,ವಿಜಯಪುರ:

ವಿಜಯಪುರ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬನಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ.ಗಳ ದಂಡ ವಿಧಿಸಿ, ನಗರದ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಜಿಲ್ಲೆಯ ಉಪ್ಪಲದಿನ್ನಿ ತಾಂಡಾದ ರಾಜು ಪಾಪು ರಾಠೋಡ (28) ಶಿಕ್ಷೆಗೊಳಗಾದ ಯುವಕ.
ಆರೋಪಿ ರಾಜು ರಾಠೋಡ ಈತನು, 16 ವರ್ಷದ ಬಾಲಕಿಗೆ, ಪ್ರೀತಿ ಮಾಡುತ್ತಿದ್ದೇನೆ, ನಿನ್ನನ್ನೆ ಮದುವೆಯಾಗುತ್ತೇನೆ ಎಂದು ನಂಬಿಸಿ, ಬಾಲಕಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೆ ತಾನು ಕರೆದಾಗ ಬರಬೇಕು, ಇಲ್ಲದಿದ್ದರೆ ನಮ್ಮಿಬ್ಬರ ವಿಚಾರ ಊರಲ್ಲಿ ಹೇಳಿ, ನಿನ್ನ ಹಾಗೂ ನಿಮ್ಮ ಮನೆಯ ಮರ್ಯಾದೆ, ಹಾಳು ಮಾಡುವೆ ಎಂದು ಹೇದರಿಸಿ, ಬಾಲಕಿಯನ್ನು ಕರೆದುಕೊಂಡು ಹೋಗಿ, ಮಹಾರಾಷ್ಟ್ರದ ಕುಡಾಳ, ತಳೇಗಾಂವನಲ್ಲಿ ಬಾಡಿಗೆ ಮನೆಯಲ್ಲಿ, ಅಕ್ರಮವಾಗಿ ಬಂಧನದಲ್ಲಿಟ್ಟು, ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಜಿಲ್ಲೆಯ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಸಿಪಿಐ ನಂದರೆಡ್ಡಿ, ಆರೋಪಿತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ಇಲ್ಲಿನ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾ ಕುಮಾರಿ ಎನ್. ಅವರು, ಪ್ರಕರಣದ ವಿಚಾರಣೆ ನಡೆಸಿ, ಆರೋಪಿ ರಾಜು ಪಾಪು ರಾಠೋಡ ಈತನಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರ್ಕಾರಿ ವಿಶೇಷ ಅಭಿಯೋಜಕ ವಿ.ಜಿ. ಹಗರಗುಂಡ, ಸರ್ಕಾರದ ಪರವಾಗಿ, ವಕಾಲತು ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss