CINE NEWS| ಹೊಸ ವರ್ಷಕ್ಕೆ ಒಟ್ಟಿಗೇ ಕಾಲಿಟ್ಟ ರಶ್ಮಿಕಾ- ವಿಜಯ್! ಕಣ್ಣಮುಚ್ಚಾಲೆ ಯಾಕೆ ಅಂತಿದ್ದಾರೆ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು ಆದರೆ ಬ್ರೇಕಪ್ ಆಗಿತ್ತು ಅನ್ನೋದು ಹಳೆ ವಿಚಾರ. ತದನಂತರ ಇಬ್ಬರು ಪ್ಯಾಚ್‌ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ನಿದರ್ಶನದಂತೆ ಈ ಜೋಡಿ ಹೊಸ ವರ್ಷಕ್ಕೆ ಒಟ್ಟಿಗೇ ಕಾಲಿಟ್ಟಿದ್ದಾರೆ.

Rashmika Mandanna: ಸ್ಥಳ ಒಂದೇ, ಫೋಟೋ ಬೇರೆ; ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಫೋಟೋರಶ್ಮಿಕಾ ಹಾಗೂ ವಿಜಯ್ ಏರ್‌ಪೋರ್ಟ್‌ನಲ್ಲಿ ಒಟ್ಟಿಗೇ ಕಾಣಿಸಿದ್ದರು. ಅದಾದ ಮೇಲೆ ಸೀ ವ್ಯೂ ಇರುವ ಫೋಟೊ ಒಂದನ್ನು ವಿಜಯ್ ಶೇರ್ ಮಾಡಿದ್ದರು. ಅದೇ ಲೊಕೇಶನ್‌ನಲ್ಲಿ ರಶ್ಮಿಕಾ ಇರುವ ಫೋಟೊ ಕೂಡ ರಶ್ಮಿಕಾ ಶೇರ್ ಮಾಡಿದ್ದರು. ಇದರಿಂದ ಇಬ್ಬರೂ ಒಟ್ಟಿಗೇ ಇದ್ದಾರೆ ಎಂದು ಫ್ಯಾನ್ಸ್ ಅಂದಾಜಿಸಿದ್ದಾರೆ.
ಡೇಟಿಂಗ್ ಮಾಡೋದೇ ನಿಜವಾದ್ರೆ ಹೇಳಿಕೊಳ್ಳೋಕೆ ಯಾಕೆ ತೊಂದರೆ, ಕಣ್ಣಾಮುಚ್ಚಾಲೆ ಬೇಡ ಅಂತಿದ್ದಾರೆ ಫ್ಯಾನ್ಸ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!