ಹೊಸದಿಗಂತ ಆನ್ಲೈನ್ ಡೆಸ್ಕ್:
ಇತ್ತೀಚೆಗಷ್ಟೇ ನಡೆದ ಸೈಮಾ ಅವಾರ್ಡ್ಸ್ನಲ್ಲಿ ತಾರೆಯರು ಡಿಸೈನರ್ ಉಡುಪುಗಳನ್ನು ತೊಟ್ಟು ಮಿಂಚಿದ್ದರು.
ಅಂತೆಯೇ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ರೆಡ್ ಗೌನ್ ತೊಟ್ಟಿದ್ದು, ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗಿ ಕಾಣುತ್ತಿದ್ದರು.
ರಶ್ಮಿಕಾ ಉಡುಗೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದರೆ, ರಶ್ಮಿಕಾ ಹೇಟರ್ಸ್ ಈ ಡ್ರೆಸ್ ಬಾಲಿವುಡ್ನ ಕಾಪಿ ಎಂದಿದ್ದಾರೆ.
ಮೆಟ್ ಗಾಲಾದಲ್ಲಿ ದೀಪಿಕಾ ಪಡುಕೋಣ್ ಧರಿಸಿದ್ದ ಡ್ರೆಸ್ನ ಶೈಲಿಯನ್ನು ಕಾಪಿ ಮಾಡಿ ಡ್ರೆಸ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ರಶ್ಮಿಕಾ ಸಿನಿಮಾಗಳ ಮೇಲೆ ಕಾನ್ಸಂಟ್ರೇಟ್ ಮಾಡಿದ್ದಾರೆ. ಸೈಮಾದಲ್ಲಿ ಎರಡೂ ಕೈಯಲ್ಲಿ ರಶ್ಮಿಕಾ ಅವಾರ್ಡ್ ಹಿಡಿದಿರುವಾಗ ಅವರ ಬಟ್ಟೆ ಬಗ್ಗೆ ತಲೆಕೆಡಿಸಿಕೊಳ್ಳೋದು ಯಾರು.. ಆದರೂ ರಶ್ಮಿಕಾ ದೀಪಿಕಾರನ್ನು ಕಾಪಿ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ