5 ಐಷಾರಾಮಿ ಮನೆ ಖರೀದಿಸಿದ್ರಾ ರಶ್ಮಿಕಾ!? ಈ ಕುರಿತು ನ್ಯಾಷನಲ್‌ ಕ್ರಷ್ ಸ್ಪಷ್ಟನೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರನ್ನು ಸ್ವಾಗತಿಸಿದರು. ಒಂದೆಡೆ ಸಿನಿಮಾ, ಮತ್ತೊಂದೆಡೆ ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ಇವರು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಬಗ್ಗೆ ಗಾಸಿಪ್, ವದಂತಿಗಳು ಸಾಮಾನ್ಯ. ರಶ್ಮಿಕಾ ಬಗ್ಗೆ ಹೆಚ್ಚು ಹೆಚ್ಚು ಗಾಸಿಪ್‌ಗಳು ಮತ್ತು ವದಂತಿಗಳು  ಕೇಳಿಬರುತ್ತಲೇ ಇವೆ. ಇತ್ತೀಚೆಗೆ ಹೊಸದಾಗಿ ರಶ್ಮಿಕಾ 5 ನಗರಗಳಲ್ಲಿ 5 ಐಷಾರಾಮಿ ಮನೆಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಇದೆ. ಹೈದರಾಬಾದ್, ಮುಂಬೈ, ಬೆಂಗಳೂರು, ಗೋವಾ ಮತ್ತು ಕೂರ್ಗ್‌ನಲ್ಲಿ ರಶ್ಮಿಕಾ ಭಾರಿ ಬಜೆಟ್‌ನಲ್ಲಿ 5 ಐಷಾರಾಮಿ ಮನೆಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ

ಇತ್ತೀಚೆಗಷ್ಟೇ ಈ ಸುದ್ದಿಯನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದಕ್ಕೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, ʻಇದು ನಿಜವಾಗಲಿʼ ಎಂದು ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಅವರ ಕೌಂಟರ್ ಟ್ವೀಟ್ ವೈರಲ್ ಆಗಿದೆ. ರಶ್ಮಿಕಾ ಉತ್ತರದಿಂದ ಇದು ಫೇಕ್ ನ್ಯೂಸ್ ಎಂಬುದು ಸ್ಪಷ್ಟವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!