ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರಿಂದ ಟ್ರಾಲ್ ಆಗ್ತಾರೆ. ಈಗಂತು ಕನ್ನಡ, ಮಲಯಾಳಂ, ತೆಲುಗು. ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಬೇಡಿಕೆಯ ನಟಿಯಾಗಿದ್ದಾರೆ.
ಇತ್ತೀಚೆಗಷ್ಟೆ ರಿಲೀಸ್ ಆದ ಪುಷ್ಪ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ತೆರಳಿದ್ದ ರಶ್ಮಿಕಾ ಹಿಂದಿಯಲ್ಲಿ ಮಾತಾಡೋಕೆ ಟ್ರೈ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಅಂತ ಬಿರುದು ಯಾರು ಕೊಟ್ಟಿದ್ದು? ಬರೀ ಓವರ್ ಆಕ್ಟಿಂಗ್ ಮಾಡ್ತಾರೆ ಅಂತ ನೆಟ್ಟಿಗರು ಗರಂ ಆಗಿದ್ದಾರೆ.
ಈಗ ಮಾತ್ರ ಅಲ್ಲ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾನೇ ಇರ್ತಾರೆ. ವಿಕ್ಕಿ ಕೌಶಲ್ ಜತೆಗಿನ ಜಾಹಿರಾತು ಒಂದರಲ್ಲಿ ಪುರುಷರ ಒಳ ಉಡುಪನ್ನು ನೋಡಿದ್ದ ಬಗ್ಗೆಯೂ ಟ್ರೋಲ್ ಆಗಿದ್ದರು.