ಸಂಬಂಧದ ಬಗ್ಗೆ ಯೋಚಿಸುವಷ್ಟು ಪುರುಸೊತ್ತಿಲ್ಲ: ವಿಜಯ್, ನಾನು ಸದಾ ಜೊತೆಯಾಗಿರುತ್ತೇವೆ ಏನೀಗ? ರಶ್ಮಿಕಾ ಖಡಕ್‌ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್‌ನಲ್ಲಿದ್ದಾರೆ ಎಂಬ ಗುಸುಗುಸು-ಪಿಸುಪಿಸು ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲೀ ವಿಜಯ್‌ ದೇವರಕೊಂಡ ಆಗಲೀ ಸ್ಪಷ್ಟನೆ ನೀಡಿಲ್ಲ. ಬದಲಿಗೆ ನಾವಿಬ್ಬರೂ ಕೇವಲ ಸ್ನೇಹಿತರು ಎಂದು ಹೇಳುತ್ತಾರೆ. ಇವೆಲ್ಲದರ ನಡುವೆ ಮೊನ್ನೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು, ಮಾಲ್ಡೀವ್ಸ್‌ಗೆ ಹಾರಿದ್ದಾರೆ.

ಮಾಲ್ಡೀವ್ಸ್ ಗೆ ಹೋಗುವ ಮುನ್ನ ಬಾಲಿವುಡ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ರಶ್ಮಿಕಾ ʻನಾನು ಸೆಲೆಬ್ರೆಟಿ ಹಾಗಾಗಿ ಎಲ್ಲರೂ ನನ್ನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ ಅದರಲ್ಲಿ ತಪ್ಪೇನಿಲ್ಲ, ಆದರೆ ಇಷ್ಟಬಂದಂತೆ ಸುದ್ದಿ ಬರೆಯುತ್ತೀರಿ ಅವೆಲ್ಲವನ್ನು ನಾನು ನಿರ್ಲಕ್ಷಿಸುತ್ತೇನೆ. ನಾವು 15 ಜನ ಆಪ್ತ ಸ್ನೇಹಿತರು, ಎಲ್ಲರೂ ಒಟ್ಟಿಗೆ ಖುಷಿಯಿಂದ ಎಂಜಾಯ್‌ ಮಾಡ್ತೇವೆ. ವಿಜಯ್ ಮತ್ತು ನಾನು ಸದಾ ಕ್ಲೋಜ್‌ ಆಗಿರುತ್ತೇವೆ ಅಂದ ಮಾತ್ರಕ್ಕೆ ನಾವು ಡೇಟಿಂಗ್ ಮಾಡುತ್ತೇವೆ ಅಂತಲ್ಲ.

ಈಗ ಪ್ರೀತಿ ಮತ್ತು ಸಂಬಂಧದ ಬಗ್ಗೆ ಯೋಚಿಸಲು ನನಗೆ ಸಮಯವಿಲ್ಲ. ನಾವು ರಿಲೇಷನ್‌ಷಿಪ್‌ನಲ್ಲಿದ್ದರೆ ಅದಕ್ಕೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಈಗ ನನ್ನ ಬಳಿ ಅಷ್ಟು ಸಮಯವಿಲ್ಲ. ನಾನು ನನ್ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಖಡಕ್ಕಾಗಿ ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!