ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು ಮತ್ತು ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳೊಂದಿಗೆ ಸ್ಟಾರ್ ನಾಯಕಿಯಾಗಿ ಸಖತ್ ಬ್ಯುಸಿ ಆಗಿದ್ದಾರೆ. ರಣಬೀರ್ ಜೊತೆ ಅನಿಮಲ್ ಹಾಗೂ ಮುಂದಿನ ವರ್ಷ ಪುಷ್ಪ 2 ಚಿತ್ರಗಳು ತೆರೆಗೆ ಬರಲು ಸಿದ್ಧವಿದ್ದು, ಇದಲ್ಲದೇ ರಶ್ಮಿಕಾ ಕೈಯಲ್ಲಿ ಇನ್ನೂ ನಾಲ್ಕು ಪ್ರಾಜೆಕ್ಟ್‌ಗಳಿವೆಯಂತೆ. ಇವುಗಳ ನಡುವೆಯೇ ಲೇಡಿ ಓರಿಯೆಂಟೆಡ್ ಸಿನಿಮಾ ಘೋಷಣೆಯಾಗಿದೆ.
ಗ್ಲಾಮರಸ್ ಪಾತ್ರಗಳನ್ನು ಮಾಡುತ್ತಿದ್ದ ರಶ್ಮಿಕಾ ಈಗ ಗ್ಲಾಮರ್ ಡೋಸ್ ಹೆಚ್ಚಿಸಿಕೊಂಡು ಲೇಡಿ ಓರಿಯೆಂಟೆಡ್ ಚಿತ್ರಗಳತ್ತ ಗಮನ ಕೊಡುತ್ತಿದ್ದಾರೆ. ನಟ ಮತ್ತು ನಿರ್ದೇಶಕ ರಾಹುಲ್ ರವೀಂದ್ರನ್ ಅವರ ನಿರ್ದೇಶನದಲ್ಲಿ ಗೀತಾ ಆರ್ಟ್ಸ್ ನಿರ್ಮಾಣದಲ್ಲಿ ರಶ್ಮಿಕಾ ಮುಖ್ಯ ನಾಯಕಿಯಾಗಿರುವ ‘ದಿ ಗರ್ಲ್ ಫ್ರೆಂಡ್’ ಚಿತ್ರ ಇಂದು ಅನೌನ್ಸ್ ಆಗಿದೆ. ಇದಕ್ಕೆ ಸಂಬಂಧಿಸಿದ ಸಣ್ಣ ಝಲಕ್ ಕೂಡ ಬಿಡುಗಡೆಯಾಗಿದೆ.
ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಖುಷಿ ಚಿತ್ರದ ಮೂಲಕ ಉತ್ತಮ ಆಲ್ಬಂ ನೀಡಿದ ಹೇಶಮ್ ಅಬ್ದುಲ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಇಷ್ಟು ವರ್ಷಗಳ ಕಾಲ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ ಈಗ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ಹೇಗೆ ಮಿಂಚಲಿದ್ದಾರೆ ಎಂಬುದನ್ನು ನೋಡಬೇಕಿದೆ.