Tuesday, February 27, 2024

ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಮಂದಣ್ಣ ಔಟ್?‌ ಟ್ವೀಟ್‌ ಮಾಡಿದ ಸಿನಿಮಾ ವಿಮರ್ಶಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ನಟಿ ರಶ್ಮಿಕಾ ಮಂದಣ್ಣ ಇದಿಘ ಮತ್ತೊಂದು ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಕನ್ನಡ ಸಿನಿ ಇಂಡಸ್ಟ್ರಯಿಂದ ರಶ್ಮಿಕಾರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಕನ್ನಡ ಸಿನಿಮಾ, ಕನ್ನಡ ಭಾಷೆ ಬಗೆಗೆ ರಶ್ಮಿಕಾ ಆಡಿರುವ ಮಾತುಗಳು ಇದೀಗ ಇಂತದ್ದೊಂದು ಸುದ್ದಿ ಹರಿದಾಡಲು ಕಾರಣವಾಗುತ್ತಿದೆ.

ಇತ್ತೀಚೆಗೆ ರಶ್ಮಿಕಾ ಮುಂಬೈನಲ್ಲಿ ವರದಿಗಾರರೊಬ್ಬರು ರಶ್ಮಿಕಾ ಅವರನ್ನು ನೀವು ಕಾಂತಾರ ಸಿನಿಮಾ ನೋಡಿದ್ದೀರಾ ಎಂದಿದ್ದಕ್ಕೆ ಅವರು ತಾವು ನೋಡಿಲ್ಲ ಮತ್ತು ನೋಡುವಷ್ಟು ಸಮಯವಿಲ್ಲ ಎಂದು ಹೇಳಿದರು. ಮೇಲಾಗಿ ಇನ್ನೊಂದು ಸಂದರ್ಶನದಲ್ಲಿ ನಿಮಗೆ ಮೊದಲ ಅವಕಾಶ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೆ ರಿಷಬ್‌ ಶೆಟ್ಟ ಹೆಸರೇಳದೆ ಸೋ ಕಾಲ್ಡ್ ಪ್ರೊಡಕ್ಷನ್ ಹೌಸ್‌ನವರು ತನಗೆ ಕರೆ ಮಾಡಿದ್ದರು ಎನ್ನುವ ರೀತಿ ಸನ್ನೆ ಮಾಡಿದ್ದರು. ಇದಕ್ಕೆ ರಿಷಬ್ ಕೂಡ ಕೌಂಟರ್‌ ಕೊಟ್ಟಿದ್ದು, ಕಾಂತಾರ ಯಶಸ್ಸಿನ ಬಳಿಕ ರಶ್ಮಿಕಾ ಹೊರತುಪಡಿಸಿ ಸಾಯಿಪಲ್ಲವಿ, ಸಮಂತಾರಂತಹ ಟಾಲೆಂಟೆಡ್‌ ನಾಯಕಿಯರೊಂದಿಗೆ ಕೆಲಸ ಮಾಡಲು ಇಷ್ಟ. ನಾಟಕೀಯತೆ ಪ್ರದರ್ಶಿಸುವ ಸೋ ಕಾಲ್ಡ್ ನಾಯಕಿಯರು ಬೇಡ ಎಂದು ರಶ್ಮಿಕಾ ಹೇಳಿದಾಗೆಯೇ ಸನ್ನೆ ಮೂಲಕ ತೋರಿಸಿ ತಿರುಗೇಟು ಕೊಟ್ಟಿದ್ರು.

ರಶ್ಮಿಕಾ ಕನ್ನಡತಿಯಾಗಿದ್ದರೂ ಕನ್ನಡ ಚಿತ್ರರಂಗಕ್ಕೆ ಅವಮಾನ ಮಾಡುತ್ತಿದ್ದಾರೆ. ಇಲ್ಲಿನ ನಟ, ನಿರ್ದೇಶಕ, ಭಾಷೆ ಮೇಲೆ ಗೌರವವಿಲ್ಲ  ಎಂದು ಕನ್ನಡ ಪ್ರೇಕ್ಷಕರು ಮತ್ತು ನೆಟ್ಟಿಗರು ಆಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿಯೂ ಹರಿಹಾಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್‌ ಮಾಡಿರುವುದಾಗಿ ಭಾರತೀಯ ಚಲನಚಿತ್ರಗಳ ಸೆನ್ಸಾರ್ ಮಂಡಳಿಯ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ವೈರಲ್ ಆಗಿದ್ದು, ಕೆಲವರು ಇದನ್ನು ಫೇಕ್ ನ್ಯೂಸ್ ಎಂದು ಹೇಳುತ್ತಿದ್ದು, ರಶ್ಮಿಕಾ ಅವರನ್ನು ಕನ್ನಡದಲ್ಲಿ ಬ್ಯಾನ್ ಮಾಡಿಲ್ಲ ಅಂತಿದಾರೆ. ಆದರೆ ಈ ಬಗ್ಗೆ ಕನ್ನಡ ಸಿನಿ ಇಂಡಸ್ಟ್ರಿಯಾಗಲೀ, ರಶ್ಮಿಕಾ ಆಗಲಿ ಸ್ಪಷ್ಟನೆ ನೀಡಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!