ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಸದಾ ಟ್ರೆಂಡಿಂಗ್ ಆಗಿರುತ್ತಾರೆ. ಇವರಿಬ್ಬರ ನಡುವೆ ಸ್ನೇಹವೋ ಪ್ರೀತಿಯೋ ಗೊತ್ತಿಲ್ಲ. ಆದರೆ ಇಬ್ಬರೂ ಮಾತ್ರ ನಾವಿಬ್ಬರು ಸ್ನೇಹಿತರಷ್ಟೇ ಎಂದು ಹೇಳಿಕೊಂಡಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ತಮ್ಮ ಹಾಲಿಡೇ ಟ್ರಿಪ್‌ನ ಫೋಟೋಗಳನ್ನು ಪ್ರತ್ಯೇಕವಾಗಿ ಹಂಚಿಕೊಂಡಿದ್ದರೂ, ಕೆಲವು ಸಾಮ್ಯತೆ ಇರುವ ಫೋಟೋ ಹಂಚಿಕೊಂಡು ಇಬ್ಬರೂ ಒಟ್ಟಿಗೆ ಟ್ರಿಪ್‌ನಲ್ಲಿದ್ದಾರೆ ಎಂದು ಟ್ರೋಲ್ ಮಾತ್ರ ಮಾಡುತ್ತಿದ್ದಾರೆ.
ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ರಶ್ಮಿಕಾ ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದು, ಆ ಚಿತ್ರದಲ್ಲಿರುವ ಸ್ಥಳವು ತನ್ನ ಗಮ್ಯಸ್ಥಾನವಾಗಿದ್ದು, ಅದನ್ನು ಹುಡುಕುತ್ತಿದ್ದೇನೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಈಗಾಗಲೇ ವಿಜಯ್ ದೇವರಕೊಂಡ ಆ ತಾಣದಲ್ಲಿರುವ ಫೋಟೋವನ್ನು ಶೇರ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ವಿಜಯ್ ಭೇಟಿ ನೀಡಿದ ಜಾಗವನ್ನು ರಶ್ಮಿಕಾ ಹುಡುಕಿಕೊಂಡು ಹೋದರು ಎಂಬ ಕಾಮೆಂಟ್‌ಗಳು ಬರುತ್ತಿವೆ.