ರಶ್ಮಿಕಾ, ಉರ್ಫಿ ಜಾವೇದ್‌ ಫಾಲೋ ಮಾಡ್ತಿದಾರೆ: ಎಲ್ಲಿ ನೋಡಿದ್ರೂ ʻಬಹಿಷ್ಕಾರʼದ ಕಾಮೆಂಟ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದಾ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ನಟಿ. ಯಾವುದಾದರೂ ವಿವಾದ ಅಥವಾ ಗಾಸಿಪ್‌ ಇನ್ಯಾವುದೋ ಟೀಕೆಗಳಿಗೆ ಒಳಗಾಗುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಅಂತಹ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಬಾಲಿವುಡ್ ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಡ್ರೆಸ್ಸಿಂಗ್‌ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದರು. ಆದರೆ ಡ್ರೆಸ್ ತುಂಬಾ ಚಿಕ್ಕದಾಗಿದ್ದು ನೋಡಲು ಕಷ್ಟ..ಕಷ್ಟ ಅಂತಿದಾರೆ ಪ್ರೇಕ್ಷಕರು.

ಬಿಗ್ ಬಾಸ್ ಬ್ಯೂಟಿ ಉರ್ಫಿ ಜಾವೇದ್ ಹಾದಿಯಲ್ಲಿ ಇದೀಗ ರಶ್ಮಿಕಾ ಕಾಣಿಸಿಕೊಂಡಿದ್ದು, ಉತ್ತರದ ಪ್ರೇಕ್ಷಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಈಗಲೇ ಫೇಮಸ್ ಆದ ಮೇಲೂ ಈ ರೀತಿ ಎಕ್ಸ್ ಪೋಸ್ ಮಾಡುವ ಅಗತ್ಯ ಏನಿತ್ತು ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಉರ್ಫಿ ಜಾವೇದ್ ಅವರನ್ನು ಫಾಲೋ ಮಾಡುತ್ತಿದ್ದಾರಾ? ಕೇಳುತ್ತಿದ್ದಾರೆ. ಕೆಲವರು ಮುಂದೆ ಹೋಗಿ ಬಾಯ್ಕಾಟ್‌ ರಶ್ಮಿಕಾ ಟ್ರೆಂಡ್‌ ಶುರು ಮಾಡಿದ್ದಾರೆ. ಸದ್ಯ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಈ ಟ್ರೋಲಿಂಗ್‌ಗೆ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ರಶ್ಮಿಕಾ ಕೈಯಲ್ಲಿ ಎರಡು ಚಿತ್ರಗಳಿವೆ. ಒಂದು ಬಾಲಿವುಡ್‌ನಲ್ಲಿ ರಣಬೀರ್‌ಗೆ ಎದುರಾಗಿ ‘ಅನಿಮಲ್’ ಸಿನಿಮಾ. ಈ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ರಶ್ಮಿಕಾ ಕೆರಿಯರ್ ಬಾಲಿವುಡ್ ನಲ್ಲಿ ಮುಂದುವರೆಯಬೇಕಾದರೆ ಈ ಸಿನಿಮಾ ಖಂಡಿತಾ ಹಿಟ್ ಆಗಬೇಕು. ಯಾಕೆಂದರೆ ಗುಡ್ ಬೈ ಮತ್ತು ಮಿಷನ್ ಮಜ್ನು ಸಿನಿಮಾಗಳು ಟುಸ್‌ ಆಗಿವೆ. ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಎದುರು ಪುಷ್ಪ-2 ಚಿತ್ರದಲ್ಲಿ ನಟಿಸಲಿದ್ದಾರೆ.

https://www.instagram.com/reel/CpIb0QajumU/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!