Wednesday, March 29, 2023

Latest Posts

ರಶ್ಮಿಕಾ ಡೈರಿ ರಿವೀಲ್: ಆತನನ್ನು ಭೇಟಿಯಾಗಲು ಕಾರಣವೇನು? ಅಭಿಮಾನಿಗಳಲ್ಲಿ ಆತಂಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯಾಶನಲ್ ಕ್ರಶ್ ರಶ್ಮಿಕಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ವಾರಿಸು ಚಿತ್ರದ ಮೂಲಕ ಪ್ರೇಕ್ಷಕರಿಗೆ ಸಂಕ್ರಾಂತಿ ಶುಭಾಶಯ ಕೋರಿದ್ದರು. ರಶ್ಮಿಕಾ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟೀವ್‌ ಇದ್ದು, ಆಗಿಂದಾಗ್ಗೆ ಫೋಟೋಗಳೊಂದಿಗೆ ಪ್ರತಿದಿನ ಅಭಿಮಾನಿಗಳು ಮತ್ತು ನೆಟ್ಟಿಗರನ್ನು ರಂಜಿಸುತ್ತಾರೆ.

ಇತ್ತೀಚೆಗೆ, ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ತಮ್ಮ ದೈನಂದಿನ ಡೈರಿಯನ್ನು ಸರಳ ಕಿರು ರೂಪದಲ್ಲಿ ಪೋಸ್ಟ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ಪ್ರತಿದಿನಿ ನಿದ್ರೆಯಿಂದ ಎದ್ದ ಬಳಿಕ ಕಾರ್ಡಿಯೋ ವರ್ಕೌಟ್ ಮಾಡಿದೆ. ನಾಳೆಯ ಶೂಟಿಂಗ್ ಶೆಡ್ಯೂಲ್‌ಗಾಗಿ ನನ್ನ ಬ್ಯಾಗ್ ಪ್ಯಾಕ್ ಮಾಡಿಟ್ಟಿದ್ದಾಯ್ತು. ಹೊರಗೆ ಹೋಗುವ ಆಸೆಯಿತ್ತು ಆದರೆ ಹವಾಮಾನ ರಿಯಿಲ್ಲದೆ ಕಾರಣ ಮತ್ತೆ ವರ್ಕ್ ಔಟ್ ಮಾಡಿ ಮನೆಯಲ್ಲಿದ್ದೀನಿ. Dermot ಜೊತೆಗೆ ಅಪಾಯಿಂಟ್‌ಮೆಂಟ್ ತೆಗದುಕೊಂಡಿದ್ದೇನೆ ಎಂದು ಬರೆದಿದ್ದರು.

ಈ ಡೈರಿಯಲ್ಲಿ ʻಡೆರ್ಮಾಟ್ʼ ಅಪಾಯಿಂಟ್ಮೆಂಟ್ ಇದರರ್ಥ ಚರ್ಮರೋಗ ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದು. ಚರ್ಮದ ಕಾಯಿಲೆಗಳ ತಜ್ಞರನ್ನು ಚರ್ಮರೋಗ ತಜ್ಞರು ಎಂದು ಕರೆಯಲಾಗುತ್ತದೆ. ಚರ್ಮರೋಗ ವೈದ್ಯರಿಗೂ ರಶ್ಮಿಕಾಗೂ ಏನು ಸಂಬಂಧ? ನೀವು ಅಪಾಯಿಂಟ್‌ಮೆಂಟ್ ಏಕೆ ತೆಗೆದುಕೊಂಡಿದ್ದೀರಿ? ರಶ್ಮಿಕಾ ಚರ್ಮರೋಗ ತಜ್ಞರನ್ನು ಭೇಟಿಯಾಗಲು ಕಾರಣವೇನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ರಶ್ಮಿಕಾಗೆ ಚರ್ಮದ ಕಾಯಿಲೆ ಇದೆಯಾ? ಎಂದು ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!