ಸ್ಪೆಷಲ್‌ ಸಾಂಗ್‌ ಮಾಡೋದಕ್ಕೆ ರಶ್ಮಿಕಾ ಬೇಡಿಕೆ ಇಟ್ಟ ಸಂಭಾವನೆ ಇಷ್ಟೊಂದಾ!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾಷೆಯ ಭೇದವಿಲ್ಲದೆ ಪ್ರತಿಯೊಬ್ಬ ನಾಯಕನೂ ಬಯಸುವ ನಾಯಕಿ. ತನ್ನ ಗ್ಲಾಮರ್ ಮತ್ತು ಅಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರುವ ಈ ಚೆಲುವೆ ಸದ್ಯ ಸೌತ್ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ‘ಪುಷ್ಪ’ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರನ್ನು ಬೆರಗುಗೊಳಿಸಿದೆ.

ರಶ್ಮಿಕಾ ಸದ್ಯ ಪುಷ್ಪ-2 ಚಿತ್ರದಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ಚೆಲುವೆ ಸ್ಟಾರ್ ಹೀರೋ ಸಿನಿಮಾದಲ್ಲಿ ಐಟಂ ಸಾಂಗ್ ಸ್ಟೆಪ್‌ ಹಾಕಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತ್ರಿವಿಕ್ರಮ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಇತ್ತೀಚಿನ ಚಿತ್ರ SSMB28 ಎಂಬ ಶೀರ್ಷಿಕೆಯೊಂದಿಗೆ ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ವಿಶೇಷ ಹಾಡೊಂದನ್ನು ಚಿತ್ರದಲ್ಲಿ ಮಾಡಲು ತ್ರಿವಿಕ್ರಮ್ ಯೋಚಿಸುತ್ತಿದ್ದಾರೆ.

ಈ ಸ್ಪೆಷಲ್ ಸಾಂಗ್‌ಗಾಗಿ ನಿರ್ಮಾಪಕರು ರಶ್ಮಿಕಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಚಿತ್ರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ,  ಈ ವಿಶೇಷ ಹಾಡಿಗಾಗಿ ರಶ್ಮಿಕಾ 4 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ. ಸದ್ಯ ಕ್ರೇಜ್ ನತ್ತ ಗಮನ ಹರಿಸಿರುವ ರಶ್ಮಿಕಾ ಈ ರೇಂಜ್ ನಲ್ಲಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುತ್ತವೆ ಸಿನಿಮಾ ಮೂಲಗಳು. ಮತ್ತು ರಶ್ಮಿಕಾ ಬೇಡಿಕೆಗೆ ತಯಾರಕರು ಓಕೆ ಹೇಳುತ್ತಾರಾ… ಅಥವಾ ಈ ವಿಶೇಷ ಹಾಡನ್ನು ಮತ್ತೊಬ್ಬ ಸುಂದರಿಯ ಜೊತೆ ಮಾಡುತ್ತಾರಾ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!