ವಿಕ್ರಂ ಜೊತೆ ನಟಿಸಬೇಕಿದ್ದ ತಮಿಳು ಸಿನಿಮಾದಿಂದ ರಶ್ಮಿಕಾ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳಿನಲ್ಲಿ ಕೆಜಿಎಫ್ ಕುರಿತಾದ ಮತ್ತೊಂದು ಸಿನಿಮಾ ತಯಾರಾಗುತ್ತಿದೆ.
ಪಾ ರಂಜಿತ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ರಶ್ಮಿಕಾ ನಾಯಕಿ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಪಾತ್ರದಿಂದ ರಶ್ಮಿಕಾ ಹೊರಬಿದ್ದಿದ್ದಾರೆ.

ವಿಕ್ರಂ ಜತೆ ನಟಿಸುವ ಚಾನ್ಸ್ ರಶ್ಮಿಕಾ ಕೈತಪ್ಪಿದ್ದು, ಮಾಳವಿಕಾ ಮೋಹನ್‌ಗೆ ಈ ಚಾನ್ಸ್ ಸಿಕ್ಕಿದೆ. ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ನಟನೆ ಇಷ್ಟವಾಗಿ ಈ ಸಿನಿಮಾಗೆ ಅವರೇ ಹೀರೋಯಿನ್ ಆಗಬೇಕು ಎಂದು ನಿರ್ದೇಶಕರು ನಿರ್ಧರಿಸಿದ್ದರು. ಆದರೆ ಕಾರಣಾಂತರಗಳಿಂದಾಗಿ ರಶ್ಮಿಕಾ ಹೊರಬಿದ್ದಿದ್ದು, ಪಾತ್ರ ಮಾಳಾವಿಕಾ ಕೈಸೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!