Sunday, July 3, 2022

Latest Posts

ಘಟಾನುಘಟಿಗಳನ್ನು ಹಿಂದಿಕ್ಕಿ ಈ ಲಿಸ್ಟ್‌ನಲ್ಲೂ ಮೊದಲ ಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿ ಇದ್ದಾರೆ. ಇದೀಗ ಯಶ್, ಸಮಂತಾ, ಪ್ರಭಾಸ್ ಹಾಗೂ ವಿಜಯ್ ದೇವರಕೊಂಡ ಮುಂತಾದ ಕಲಾವಿದರನ್ನು ಹಿಂದಿಕ್ಕಿ ರಶ್ಮಿಕಾ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಯಾವುದರಲ್ಲಿ ಮೊದಲನೆ ಸ್ಥಾನ?
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿದ್ದು, ಇದರಲ್ಲಿ ಮೊದಲನೇ ಸ್ಥಾನ ರಶ್ಮಿಕಾ ಮಂದಣ್ಣ ಪಡೆದುಕೊಂಡಿದ್ದಾರೆ.

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿಎಲ್ಲರೂ ನೋಡಿರುವಂತೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟೀವ್ ಆಗಿ ಇದ್ದೇ ಇರುತ್ತಾರೆ. ತಮ್ಮ ದಿನಚರಿಯನ್ನು ಕೂಡ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. 9.88 ರೇಟಿಂಗ್ ಪಡೆದು ರಶ್ಮಿಕಾ ಮೊದಲ ಸ್ಥಾನದಲ್ಲಿದ್ದು, 9.67 ರೇಟಿಂಗ್ ಪಡೆದ ವಿಜಯ್ ದೇವರಕೊಂಡ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಯಶ್, ನಾಲ್ಕನೇ ಸ್ಥಾನದಲ್ಲಿ ಸಮಂತಾ ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss