ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮುಂಚಿನಿಂದಲೂ ಒಳ್ಳೆ ಸ್ನೇಹಿತರು. ಹಾಗೆ ಅವರಿಬ್ಬರೂ ಡೇಟಿಂಗ್ನಲ್ಲಿದ್ದಾರೆ ಅನ್ನೋ ಸುದ್ದಿ ಕೂಡ ಎಲ್ಲೆಡೆ ಹರಿದಾಡ್ತಿದೆ. ಇಂಥ ಸಮಯದಲ್ಲೇ ಶೂಟಿಂಗ್ನಲ್ಲಿ ಬ್ಯುಸಿ ಇರೋ ಇವರಿಬ್ಬರು ಬಿಡುವು ಮಾಡಿಕೊಂಡು ಮೀಟ್ ಮಾಡಿದ್ದಾರೆ.
ಶೂಟಿಂಗ್ಗಾಗಿ ಇಬ್ಬರೂ ಮುಂಬೈನಲ್ಲಿದ್ದು, ಸಮಯ ಮಾಡಿಕೊಂಡು ಮೀಟ್ ಮಾಡಿದ್ದಾರೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ನಲ್ಲಿ ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿತ್ತು. ಇವರಿಬ್ಬರು ಡೇಟಿಂಗ್ ಕೂಡ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಇದೀಗ ಇದಕ್ಕೆ ಪುಷ್ಠಿ ಕೊಡುವಂತೆ ಇಬ್ಬರೂ ಸುತ್ತಾಡ್ತಾ ಇದ್ದಾರೆ.