Wednesday, August 17, 2022

Latest Posts

ರಶ್ಮಿಕಾ ನಟನೆಯ ಚೊಚ್ಚಲ ಬಾಲಿವುಡ್​ ಸಿನಿಮಾ ‘ಮಿಷನ್​ ಮಜ್ನು’ ರಿಲೀಸ್​ಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದ ನಂತರ ಬಾಲಿವುಡ್​ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಅಭಿನಯದ ‘ ಮಿಷನ್ ಮಜ್ನು’ ಬಿಡುಗಡೆಗೆ ಸಿದ್ಧವಾಗಿದೆ.
ಶಂತನು ಬಾಗ್ಚಿ ನಿರ್ದೇಶನದ 1970 ರ-ಸೆಟ್, ಬೇಹುಗಾರಿಕೆ, ಥ್ರಿಲ್ಲರ್ ಚಿತ್ರ ‘ ಮಿಷನ್ ಮಜ್ನು’ ಮೇ 13, 2022ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಮಿಷನ್ ಮಜ್ನು ಚಿತ್ರ 1970ರ ದಶಕದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಎನ್ನಲಾಗಿದೆ. ಭಾರತೀಯ ಗೂಢಚಾರ ಸಂಸ್ಥೆ ರಾ(RAW) ತಂಡ ಪಾಕಿಸ್ತಾನದಲ್ಲಿ ನಡೆಸಿದ ಅತಿ ದೊಡ್ಡ ಆಪರೇಷನ್ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಈ ಚಿತ್ರ ಪಾಕಿಸ್ತಾನದ ನೆಲದಲ್ಲಿ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಾ ಕಾರ್ಯಾಚರಣೆ(RAW operation)ಯ ಕಥೆ ಹೇಳಲಿದೆ.
ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲ್ಹೋತ್ರಾ ಅವರು RAW ಏಜೆಂಟ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಾಕಿಸ್ತಾನದ ಹೃದಯಭಾಗದಲ್ಲಿ ಭಾರತದ ಅತ್ಯಂತ ಧೈರ್ಯಶಾಲಿ ರಹಸ್ಯ ಕಾರ್ಯಾಚರಣೆಯನ್ನು ಮುನ್ನಡೆಸುತ್ತಾರೆ.
ಮಿಷನ್ ಮಜ್ನು ಕಥೆಯನ್ನು ಪರ್ವೀಝ್ ಶೇಖ್, ಅಸೀಂ ಅರೋರಾ, ಸುಮಿತ್ ಬತೇಜಾ ಬರೆದಿದ್ದಾರೆ. ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿದ್ದು, ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿ.
ಪ್ರೊಡಕ್ಷನ್ ಹೌಸ್ RSVP ಮಿಷನ್ ಮಜ್ನು ರಿಲೀಸ್​ ಡೇಟ್​ ಅನ್ನು ಅನೌನ್ಸ್​ ಮಾಡಿದೆ. ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ. ಮಿಷನ್ ಮಜ್ನು ಮೇ 13, 2022ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!