ಬಾಲಿವುಡ್‌ನಲ್ಲಿಲ್ಲ ರಶ್ಮಿಕಾಗೆ ಸಕ್ಸಸ್, ಮಿಷನ್ ಮಜ್ನು ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಕಾಲಿಟ್ಟಾಗಿನಿಂದಲೂ ಸಕ್ಸಸ್ ಅವರ ಕೈಗೆ ಎಟುಕುತ್ತಿಲ್ಲ.
ಅಮಿತಾಬ್ ಬಚ್ಚನ್‌ನಂಥ ಮಹಾನ್ ಕಲಾವಿದನ ಜೊತೆ ಸ್ಕ್ರೀನ್ ಶೇರ್ ಮಾಡಿದರೂ ಗುಡ್‌ಬೈ ಚಿತ್ರ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ.

ಇದೀಗ ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಇದ್ದು, ಈ ಸಿನಿಮಾಗೆ ಥಿಯೇಟರ್ ಭಾಗ್ಯವೇ ಇಲ್ಲದಂತಾಗಿದೆ. ಮಿಷನ್ ಮಜ್ನು ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ. ಜನವರಿ 18 ರಂದು ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ಗೆ ಬರಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!