Thursday, August 11, 2022

Latest Posts

ಗೌರಿ ಗಣೇಶಹಬ್ಬದ ಸಂಭ್ರಮ: ರಾಜಧಾನಿಯಲ್ಲಿ ಏರಿಕೆಯಾಯ್ತು ಹೂವು, ಹಣ್ಣಿನ ಬೆಲೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ನೀಡಿರುವ ಬಲವಾದ ಪೆಟ್ಟಿನ ನೋವಿಂದ ಇನ್ನೂ ಯಾರೂ ಸುಧಾರಿಸಿಕೊಂಡಿಲ್ಲ. ಇದರ ಜೊತೆಯೇ ಇದೀಗ ಬೆಲೆ ಏರಿಕೆ ಬಿಸಿ ತಟ್ಟಿದೆ.
ಸಾಲು ಸಾಲು ಹಬ್ಬಗಳ ಹಿನ್ನೆಲೆ ರಾಜಧಾನಿಯಲ್ಲಿ ತರಕಾರಿ,ಹಣ್ಣು, ಹೂವಿನ ಬೆಲೆ ಗಗನಕ್ಕೇರಿದೆ. ಹಣವಿಲ್ಲದಿದ್ದರೂ ಹಬ್ಬಹರಿದಿನಗಳಲ್ಲಿ ಏತಕ್ಕೂ ಕಡಿಮೆ ಮಾಡದ ಜನ, ಖರೀದಿಗೆ ಮುಂದಾಗಿದ್ದಾರೆ. ಬೆಲೆ ಏರಿಕೆ ಕಂಡು ಒಂದು ಕೆ.ಜಿ ಕೊಳ್ಳುವ ಕಡೆ ಕಾಲು ಕೆ.ಜಿ ಮಾತ್ರ ಕೊಳ್ಳುತ್ತಿದ್ದಾರೆ. ಮಾರಾಟಗಾರರು ನಾವು ಇಷ್ಟು ಸಮಯ ಲಾಸ್‌ನಲ್ಲಿದ್ದೇವೆ, ಹಣ ಗಳಿಸಲು ನಮಗೆ ಹಬ್ಬದ ಸಮಯ ಅಷ್ಟೆ ಸಿಗುವುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೂಗಳ ರೇಟ್ ಎಷ್ಟು?
ಕೆಜಿ ಕನಕಾಂಬರ 2 ಸಾವಿರ ರೂ.,ಮಲ್ಲಿಗೆ 1 ಸಾವಿರದಿಂದ 1,200 ರೂ.,ಕಾಕಡ 400 ರಿಂದ 600 ರೂ.,ಸುಗಂಧರಾಜ – 350 ರಿಂದ 400 ರೂ., ಗುಲಾಬಿ 300 ರೂ., ಸೇವಂತಿಗೆ 150 ರೂ.,

ಹಣ್ಣಿನ ರೇಟ್ ಎಷ್ಟು?
1 ಕೆಜಿ ಸೇಬು 120 ರಿಂದ 140 ರೂ., ದಾಳಿಂಬೆ 130 ರಿಂದ 150 ರೂ., ಮೂಸಂಬಿ 40 ರೂ., ಬಾಳೆಹಣ್ಣು 70 ರಿಂದ 80 ರೂ.,ಕಿತ್ತಳೆ 80 ರೂ., ಸೀತಾಫಲ 60 ರೂ., ಸಪೋಟ 50 ರೂ., ಬೇರಿಕಾಯಿ 130 ರೂ., ದ್ರಾಕ್ಷಿ 150 ರಿಂದ 180 ರೂ., ಸೀಬೇಹಣ್ಣು 80 ರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss