Monday, August 15, 2022

Latest Posts

ಶ್ರೀಕಂಠೇಶ್ವರ ಸ್ವಾಮಿ ಪಂಚ ಮಹಾರಥೋತ್ಸವ ರದ್ದು ಮಾಡಿದ ಡಿಸಿ, ಭಕ್ತರಿಂದ ಪ್ರತಿಭಟನೆ

ದಿಗಂತ ವರದಿ  ಮೈಸೂರು:

ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಜಿಲ್ಲೆಯ ನಂಜನಗೂಡಿನಲ್ಲಿ ಮಾ.26ರಂದು ನಡೆಯಬೇಕಿದ್ದ ಶ್ರೀಕಂಠೇಶ್ವರ ಸ್ವಾಮಿ ಪಂಚ ಮಹಾರಥೋತ್ಸವವನ್ನು ರದ್ದು ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಮಾ. 19 ರಿಂಧ ಮಾ 30ರವರೆಗೆ ನಡೆಯಬೇಕಿದ್ದ ವಿಜೃಂಭಣೆಯ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಗೌತಮ ಪಂಚ ಮಹಾರಥೋತ್ಸವ ಸಂಭ್ರಮವನ್ನು ಈ ಬಾರಿಯೂ ಮಹಾಮಾರಿ ಕೊರೋನಾ ನುಂಗಿಹಾಕಿದೆ. ಕಳೆದ ವರ್ಷ ಕೊರೋನಾ ಸೋಂಕು ಕಾಲಿಟ್ಟ ಆರಂಭಿಕ ದಿನಗಳಲ್ಲಿ ನಡೆಯಬೇಕಿದ್ದ ದೊಡ್ಡ ಜಾತ್ರಾ ಮಹೋತ್ಸವ ರದ್ದಾಗಿತು. ಈ ಬಾರಿಯೂ ಕೊರೋನಾ ಸೋಂಕು ಉಲ್ಬಣ ಆಗುತ್ತಿರುವುದರಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದೊಡ್ಡ ಜಾತ್ರೆಯನ್ನು÷್ನ ರದ್ದುಗೊಳಿಸಿ, ಕೇವಲ ಸಾಂಪ್ರದಾಯಿಕ ಹಾಗೂ ಸರಳ ಜಾತ್ರೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಈ ಬಾರಿಯಾದರೂ ರಥ ಎಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಭಕ್ತರ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕಾರ್ಯವನ್ನು ಮೊಟಕುಗೊಳಿಸಿ ಸಂಪ್ರದಾಯಬದ್ಧ ಧಾರ್ಮಿಕ ಕಾರ್ಯಕ್ರಮಳಿಗೆ ಸೀಮಿತಗೊಳಿಸಲಾಗಿದೆ.
ದೇವಾಲಯದ ಅರ್ಚಕರು, ಸಿಬ್ಬಂದಿ ಹಾಗೂ ಸ್ಥಳೀಯರ ಉಪಸ್ಥಿತಿಗೆ ಸೀಮಿತಗೊಳಿಸಿ ದೇವಾಲಯದ ಒಳಾವರಣದಲ್ಲೇ ನಡೆಸಲು ಅನುಮತಿ ನೀಡಲಾಗಿದೆ . ಮಾ.26ರಂದು ನಡೆಯಬೇಕಿದ್ದ ಗೌತಮ ಪಂಚಮಹಾರಥೋತ್ಸವ ಬದಲಾಗಿ ದೇವಾಲಯದ ಹೊರ ಆವರಣದಲ್ಲಿ ಅರ್ಚಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ರಥೋತ್ಸವ ನಡೆಸಲು ಅನುಮತಿ ನೀಡಲಾಗಿದೆ.
ಮಾ. 19 ರಿಂದ ಮಾ. 30ರವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರಕಾರಿ ಕೆಲಸ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳು ಹಾಗೂ ನಂಜನಗೂಡಿನ ಸ್ಥಳೀಯ ಗ್ರಾಮಸ್ಥರನ್ನ ಹೊರತುಪಡಿಸಿ ಹೊರರಾಜ್ಯ, ಹೊರ ಜಿಲ್ಲೆ, ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿದೆ.
ರಥೋತ್ಸವ ರದ್ದುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ :
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಜಾತ್ರಾ ಮಹಾರಥೋತ್ಸವ ರದ್ದುಗೊಳಿಸಿರುವುದನ್ನು ಖಂಡಿಸಿ ಭಕ್ತರು ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ಕೋವಿಡ್ ಹೆಚ್ಚಳದ ಕಾರಣ ನೀಡಿ ಕಳೆದ ಬಾರಿಯೂ ರಥೋತ್ಸವ ಆಚರಣೆ ನಡೆದಿಲ್ಲ. ಬೇರೆ ಕಡೆಗಳಲ್ಲಿ ರಥೋತ್ಸವ ಆಚರಣೆಗೆ ಅನುಮತಿ ನೀಡುತ್ತೀರಿ, ನಮಗೂ ರಥೋತ್ಸವ ಆಚರಣೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಮಂಗಳವಾರ ಇದ್ದಕ್ಕಿದ್ದಂತೆ ಆದೇಶ ಹೊರಡಿಸಿದ್ದೀರಿ. ಇದರ ಉದ್ದೇಶ ಏನಿದೆ ಪ್ರತಿವರ್ಷ ರಥೋತ್ಸವ ರದ್ದುಗೊಳಿಸುವುದು ಸರಿಯಲ್ಲ. ಅದು ನಮ್ಮ ನಂಬಿಕೆ, ರಥೋತ್ಸವಕ್ಕೆ ಅನುಮತಿ ನೀಡಿ ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss