48 ವರ್ಷಗಳ ಬಳಿಕ ತೆರೆಯಲಿದೆ ರತ್ನ ಭಂಡಾರ: ಪುರಿ ಜಗನ್ನಾಥನ ಆಭರಣಗಳ ಎಣಿಕೆಗೆ ದಿನಾಂಕ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿನ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ರತ್ನ ಭಂಡಾರದ ಆಭರಣಗಳ ಎಣಿಕೆ ಕಾರ್ಯಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸುಮಾರು 48 ವರ್ಷಗಳ ಬಳಿಕ ನಡೆಯುತ್ತಿರುವ ಈ ಪ್ರಕ್ರಿಯೆ ಮಾರ್ಚ್ 25ರಂದು ಮಧ್ಯಾಹ್ನ 12:12ರಿಂದ 1:45ರವರೆಗೆ ನಿಗದಿಪಡಿಸಿದ ಶುಭ ಮುಹೂರ್ತದಲ್ಲಿ ಆರಂಭವಾಗಲಿದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ. ಮೂಲಗಳ ಪ್ರಕಾರ ‘ರತ್ನ ಭಂಡಾರ’ದಲ್ಲಿ ಶ್ರೀ ಜಗನ್ನಾಥ, ಬಲಭದ್ರ ಹಾಗೂ ದೇವಿ ಸುಭದ್ರೆಯ ಅಮೂಲ್ಯ ಚಿನ್ನ, ಬೆಳ್ಳಿ ಮತ್ತು ವಿವಿಧ ರತ್ನಾಭರಣಗಳನ್ನು ಸಂಗ್ರಹಿಸಲಾಗಿದೆ. … Continue reading 48 ವರ್ಷಗಳ ಬಳಿಕ ತೆರೆಯಲಿದೆ ರತ್ನ ಭಂಡಾರ: ಪುರಿ ಜಗನ್ನಾಥನ ಆಭರಣಗಳ ಎಣಿಕೆಗೆ ದಿನಾಂಕ ಫಿಕ್ಸ್