Friday, June 2, 2023

Latest Posts

ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರತ್ನನ್ ಪ್ರಪಂಚ ಸಿನಿಮಾ ಬೆಡಗಿ ರೆಬಾ ಮೋನಿಕಾ ಜಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರತ್ನನ್ ಪ್ರಪಂಚ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರೆಬಾ ಮೋನಿಕಾ ಜಾನ್ ತಮ್ಮ ಬಹುಕಾಲದ ಗೆಳೆಯ ಜೋಮೋನ್ ಜೋಸೆಫ್ ಜೊತೆ ರೆಬಾ ಮೋನಿಕಾ ಜಾನ್ ವಿವಾಹ ಆಗಿದ್ದಾರೆ.
ಜನವರಿ 9ರಂದುಬೆಂಗಳೂರಿನ ಬ್ರಿಗೇಡ್​ ರಸ್ತೆಯ ಚರ್ಚ್​ನಲ್ಲಿ ರೆಬಾ ಜೋಮೋನ್ ವಿವಾಹವಾಗಿದ್ದಾರೆ.ಈ ಕುರಿತು ರೆಬಾ ಮೋನಿಕಾ ಜಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇವರ ಮದುವೆಗೆ ತಮಿಳು ಹಾಗು ಮಲಯಾಳಂ ಚಿತ್ರರಂಗದ ಸ್ನೇಹಿತರು ಹಾಗು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ರೆಬಾ ಮೋನಿಕಾ ಜಾನ್ ಮಲೆಯಾಳಿಯಾಗಿದ್ದು, ಆದರೆ ಬೆಂಗಳೂರಿನಲ್ಲೇ ಅವರು ಜನಿಸಿದ್ದರಿಂದ ಇಲ್ಲೇ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನ ಮುಗಿಸಿದ್ದಾರೆ.
ನಟ ಡಾಲಿ ಧನಂಜಯ್ ಜೊತೆ ರತ್ನನ್ ಪ್ರಪಂಚ ಸಿನಿಮಾದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದ ರೆಬಾ ಮೋನಿಕಾ ಜಾನ್, 2016ರಲ್ಲಿ ಮಲಯಾಳಂನ ಜಾಕೋಬಿಂಟೆ ಸ್ವರ್ಗರಾಜ್ಯಂ, ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಮಿಖಾಯೆಲ್, ಫೊರೆನ್ಸಿಕ್ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ತಮಿಳಿನಲ್ಲಿ ವಿಜಯ್ ನಟನೆಯ ಬಿಗಿಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!