ರವಾ ಕೇಕ್‌ ಟು ಬಿರಿಯಾನಿ:ನಿಮ್ಮ ಹೊಸ ವರ್ಷದ ಪಾರ್ಟಿ ಮೆನುಗೆ ಈ ಖಾದ್ಯಗಳನ್ನು ಸೇರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022 ಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಏಕೆಂದರೆ ಹೊಸ ವರ್ಷ ಬೆರಳೆಣಿಕೆ ದೂರದಲ್ಲಿದೆ. ಹೊಸ ವರ್ಷದ ಮುನ್ನಾದಿನದ ಪಾರ್ಟಿಗೆ ಒಳ್ಳೆಯ ಸಂಗೀತ, ರುಚಿಕರವಾದ ಖಾದ್ಯಗಳು ಮತ್ತು ಪಾನೀಯ ಸೇವನೆ ಈಗಿನ ಟ್ರೆಂಡ್‌ ಆಗಿದೆ. ಪರಿಪೂರ್ಣವಾದ ಹೊಸ ವರ್ಷದ ಪಾರ್ಟಿಗೆ ನಿಮ್ಮ ಮೆನುವನ್ನು ತಯಾರಿಸುವುಆಗ ಕೆಲವೊಂದು ವಿಶೇಷವಾದ ತಿನಿಸುಗಳು ಮಿಸ್‌ ಆಗಲೇಬಾರದು. ಈ ವಿಶೇಷ ಸಂದರ್ಭದಲ್ಲಿ ಗೆಸ್ಟ್‌ಗಳಿಗೆ ನೀಡಬೇಕಾದ ರುಚಿಯಾದ ತಿಂಡಿ ಬಗ್ಗೆ ಯೋಚಿಸುತ್ತಿದ್ದರೆ ಕೆಲ ಖಾದ್ಯಗಳ ಲಿಸ್ಟ್‌ ಇಲ್ಲಿದೆ.

ಬಿರಿಯಾನಿ

ಬಿರಿಯಾನಿ ಇಲ್ಲದೆ, ಯಾವುದೇ ಒಂದು ಕಾರ್ಯಕ್ರಮ ನಿಜವಾಗಿಯೂ ಸಂಪೂರ್ಣವಾಗುವುದಿಲ್ಲ. ಈ ಬಿರಿಯಾನಿಯಲ್ಲಿ ಚಿಕನ್, ಮಟನ್, ಮೊಟ್ಟೆ ಅಥವಾ ಪನೀರ್, ತರಕಾರಿ ಯಾವುದಾದರೂ ಫ್ಲೇವರ್‌ನ ಬಳಸಿ ಬಡಿಸಬಹುದು. ಕಂಪ್ಲೀಟ್‌ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಕೊನೆಯಾದಗಿ ಊಟದ ಕಡೆ ಇರುವ ಕಾರಣ ಬಿರಿಯಾನಿ ದಿ ಬೆಸ್ಟ್‌ ಡಿಶ್.

ಚೀಸ್ ಫಂಡ್ಯು

ಪ್ರತಿಯೊಬ್ಬರೂ ಈ ಪಾಕವಿಧಾನವನ್ನು ಇಷ್ಟಪಡುತ್ತಾರೆ ಏಕೆಂದರೆ ಇದು ತಯಾರಿಸಲು ತುಂಬಾ ಸರಳವಾಗಿದೆ. ಬೇಬಿ ಆಲೂಗಡ್ಡೆ, ಬೆಲ್ ಪೆಪರ್ ಮತ್ತು ಹೋಳಾದ ಸೇಬುಗಳು ಸಹ ಉತ್ತಮ ಆಯ್ಕೆ.

ರವಾ ಕೇಕ್

ರವಾ ಕೇಕ್ ಅನ್ನು ಹೊಸ ವರ್ಷದ ಪಾರ್ಟಿಗೆ ಏಕೆ ಪರಿಚಯಿಸಬಾರದು? ತಯಾರಿಸಲು ಬಹಳ ಸರಳ ತಿನ್ನಲೂ ಕೂಡ.

ಚೀಜಿ ಬ್ರೆಡ್ ರೋಲ್

ಪಿಜ್ಜಾ ಮತ್ತು ಬ್ರೆಡ್ ರೋಲ್‌ನ ಈ ಸಂಯೋಜನೆಯಲ್ಲಿ ಒಟ್ಟಿಗೆ ಬರುತ್ತವೆ. ಹೆಸರಿಗೆ ಅನುಗುಣವಾಗಿ, ಚೀಸ್, ಗಿಡಮೂಲಿಕೆಗಳು, ತರಕಾರಿಗಳು ಮತ್ತು ಬ್ರೆಡ್ನಲ್ಲಿ ಲೋಡ್ ಮಾಡಿ ರೋಲ್‌ ಮಾಡಲಾಗುತ್ತದೆ.

ವೆಜಿಟೇಬಲ್‌ ಕುರ್ಮಾ

ರೆಸ್ಟೋರೆಂಟ್ ಶೈಲಿಯ ತರಕಾರಿ ಕುರ್ಮಾ ಮುಖ್ಯ ಕೋರ್ಸ್. ಈ ಬಾಯಲ್ಲಿ ನೀರೂರಿಸುವ ಮೇಲೋಗರ ತಯಾರಿಸಲು ಕೂಡ ತುಂಬಾ ಸುಲಭ ಅನ್ನ, ಬಿರಿಯಾನಿ, ನಾನ್‌, ಬಟರ್‌ ನಾನ್‌, ರೋಟಿ ಇವೆಲ್ಲವುಗಳೊಂದಿಗೆ ಈ ಭಕ್ಷ್ಯವು ಪರಿಪೂರ್ಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!