ನಟ ರವಿಚಂದ್ರನ್‌- ಚಿ. ಗುರುದತ್‌ ಕಾಂಬಿನೇಷನ್‌ ನಲ್ಲಿ ಬರ್ತಿದೆ ʼರಮ್ಯಾ ರಾಮಸ್ವಾಮಿʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಲವು ದಿನಗಳ ಬಳಿಕ ಈಗ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಹೊಸ ಸಿನಿಮಾವೊಂದನ್ನು ಸೈನ್‌ ಹಾಕಿದ್ದಾರೆ.
ಈ ಸಿನಿಮಾಕ್ಕೆ ರಮ್ಯಾ ರಾಮಸ್ವಾಮಿ ಎಂದು ಹೆಸರಿಡಲಾಗಿದ್ದು, ಜನಾರ್ದನ ಮಹರ್ಷಿ ಚಿತ್ರಕಥೆ ಬರೆದಿದ್ದಾರೆ. ನಿರ್ದೇಶಕ ಚಿ. ಗುರುದತ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ.
ನಟ ರವಿಚಂದ್ರನ್‌ ಅವರಿಗೆ ಜೋಡಿಯಾಗಿ ಯಾವ ನಟಿ ಆಯ್ಕೆಯಾಗುತ್ತಾರೆ ಎಂಬ ಕುತೂಹಲವಿದ್ದು, ಈ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹೊರಬರುವ ನಿರೀಕ್ಷೆ ಇದೆ.
ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!