spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರವೀಂದ್ರ ಜಡೇಜಾ ಸ್ಪೋಟಕ ಬ್ಯಾಟಿಂಗ್: ಕೋಲ್ಕತ್ತಾ ವಿರುದ್ಧ ಚೆನ್ನೈಗೆ ರೋಚಕ ಗೆಲುವು

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಂತಿಮ ಕ್ಷಣದಲ್ಲಿ ರವೀಂದ್ರ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ.
172 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ , ಆರಂಭಿಕರಾದ ರುತುರಾಜ್ ಗಾಯಕ್ವಾಡ್​ ಮತ್ತು ಫಾಫ್​ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ 74 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು.
40 ರನ್​ಗಳಿಸಿದ್ದ ಗಾಯಕ್ವಾಡ್​ ರಸೆಲ್​ ಬೌಲಿಂಗ್​ನಲ್ಲಿ ಮಾರ್ಗನ್​ಗೆ ಕ್ಯಾಚಿತ್ತು ಔಟಾದರು. ನಂತರ ಡುಪ್ಲೆಸಿಸ್​ ಜೊತೆಗೂಡಿದ ಮೊಯೀನ್ ಅಲಿ(32) 2ನೇ ವಿಕೆಟ್​​ಗೆ 28 ರನ್​ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಪ್ಲೆಸಿಸ್​(43) ಪ್ರಸಿಧ್ ಕೃಷ್ಣಾಗೆ ವಿಕೆಟ್​ ಒಪ್ಪಿಸಿದರು.
ಮೊಯೀನ್​ ಅಲಿ 32, ಅಂಬಾಟಿ ರಾಯುಡು 10, ಸುರೇಶ್ ರೈನಾ 11, ಎಂ.ಎಸ್.ಧೋನಿ 1 ರನ್​ಗಳಿಸಿ ಔಟಾದರು.
138ಕ್ಕೆ 4 ವಿಕೆಟ್​ ಕಳೆದುಕೊಂಡರೂ ಗೆಲುವಿನ ನೆಚ್ಚಿನ ತಂಡವಾಗಿದ್ದ ಸಿಎಸ್​ಕೆ ದಿಢೀರ್ ಕುಸಿತ ಅನುಭವಿಸಿದ್ದರಿಂದ ಕೊನೆಯ 2 ಓವರ್​ಗಳಲ್ಲಿ ಗೆಲ್ಲಲು 26 ರನ್​ ಗಳಿಸಬೇಕಿತ್ತು. ಮೇಲ್ನೋಟಕ್ಕೆ ಕೆಕೆಆರ್​ ಗೆಲ್ಲಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ರವೀಂದ್ರ ಜಡೇಜಾ ಎಲ್ಲವನ್ನು ತಲೆಕೆಳಗೆ ಮಾಡಿದರು. ಪ್ರಸಿಧ್ ಕೃಷ್ಣ ಎಸೆದ 19ನೇ ಓವರ್​ನಲ್ಲಿ 22 ರನ್‌ಸೂರೆಗೈದು ಪಂದ್ಯವನ್ನು ಸಿಎಸ್​ಕೆ ಕಡೆಗೆ ತಿರುಗಿಸಿದರು.
ಸಿಎಸ್​ಕೆ ಗೆಲುವಿಗೆ ಕೊನೆಯ ಓವರ್​ನಲ್ಲಿ 4 ರನ್ ​ಅಗತ್ಯವಿತ್ತು. ನರೈನ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್​ ಕರ್ರನ್​ ಕ್ಯಾಚ್​ ನೀಡಿ ಔಟಾದರು. ನಂತರದ ಎಸೆತ ಡಾಟ್​ ಆದರೆ 3ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್​ 3 ರನ್​ ತೆಗೆದುಕೊಂಡರು. 3 ಎಸೆತಕ್ಕೆ ಕೇವಲ 1 ರನ್​ ಅಗತ್ಯವಿತ್ತು. 4ನೇ ಎಸೆತದಲ್ಲಿ ಡಾಟ್ ಮಾಡಿದ ಜಡೇಜಾ 5ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕೊನೆಯ ಎಸೆತದಲ್ಲಿ ದೀಪಕ್​ ಚಹರ್​ ಸಿಂಗಲ್​ ತೆಗೆಯುವುದರೊಂದಿಗೆ ಸಿಎಸ್​ಕೆಗೆ ರೋಚಕ ಗೆಲುವು ತಂದುಕೊಟ್ಟರು.
ಕೆಕೆಆರ್​ ಪರ ಸುನೀಲ್ ನರೈನ್ 3 ವಿಕೆಟ್​, ವರುಣ್ ಚಕ್ರವರ್ತಿ 22ಕ್ಕೆ1, ಪ್ರಸಿಧ್ ಕೃಷ್ಣ 41ಕ್ಕೆ1, ​ಲಾಕಿ ಫರ್ಗುಸನ್​ 33ಕ್ಕೆ1, ಆ್ಯಂಡ್ರೆ ರಸೆಲ್ 28ಕ್ಕೆ 1 ವಿಕೆಟ್​ ಪಡೆದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss