ಆರ್​ಸಿಬಿ ಬೌಲಿಂಗ್​ ದಾಳಿಗೆ ಎಡವಿದ ರಾಜಸ್ಥಾನಕ್ಕೆ ಸೋಲಿನ ಬರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್​ಸಿಬಿ ಬೌಲಿಂಗ್​ ದಾಳಿಗೆ ಸರ್ವಪತನ ಕಂಡ ರಾಜಸ್ಥಾನ್​ ರಾಯಲ್ಸ್​ ಹೀನಾಯ ಸೋಲು ಕಂಡಿದೆ.

ಜೈಪುರದ ಮಾನ್​ಸಿಂಗ್​ ಸವಾಯ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಬೆಂಗಳೂರು 5 ವಿಕೆಟ್​ ನಷ್ಟಕ್ಕೆ 171 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ಕೇವಲ 10.3 ಓವರ್​ಗಳಲ್ಲಿ 59 ರನ್​ಗೆ ಸರ್ವಪತನ ಕಂಡಿತು.

ಗುರಿ ಬೆನ್ನಟಿದ ರಾಜಸ್ಥಾನ್​ ಪರ ಕೇವಲ ಎರಡು ಆಟಗಾರರು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದ ಎಲ್ಲರು ಒಂದಂಕಿಗೆ ಸೀಮಿತರಾದರು. ಇದರಲ್ಲಿ ನಾಲ್ಕು ಮಂದಿ ಶೂನ್ಯಕ್ಕೆ ಔಟಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!