SPORTS | ಆರ್‌ಸಿಬಿ ಮನೆಗೆ, ಆದರೂ ಕೊಹ್ಲಿ ಶತಕ ಮರೆಯೋಕಾಗತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ 16 ನೇ ಆವೃತ್ತಿಯಲ್ಲಿಯೂ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಕಡೆಯ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಮುಖಾಮುಖಿಯಾಗಿದ್ದು, ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.

ಆದರೆ, ಆರ್‌ಸಿಬಿ ಅಂದ್ರೆ ವಿರಾಟ್, ವಿರಾಟ್ ಅಂದ್ರೆ ಆರ್‌ಸಿಬಿ ಅನ್ನೋ ಮಾತು ಈಗಲೂ ಫ್ಯಾನ್ಸ್ ಬಾಯಲ್ಲಿ ಗುನುಗುತ್ತಿದೆ, ಅದಕ್ಕೆ ಕಾರಣ ನಿನ್ನೆ ಪಂದ್ಯದಲ್ಲಿ ವಿರಾಟ್ ಬಾರಿಸಿದ ಅತ್ಯಾಕರ್ಶಕ ಶತಕ. ಹೌದು, ಬರೀ ಫೋರ್, ಸಿಕ್ಸ್ ಬಾರಿಸುತ್ತಾ 100 ರನ್ ಚಚ್ಚಿದ್ದಾರೆ.

ಮೊದಲ ಓವರ್‌ನಿಂದ ಕಡೆಯ ಓವರ್‌ವರೆಗೂ ಫೀಲ್ಡ್‌ನಲ್ಲೇ ಇದ್ದ ಕೊಹ್ಲಿ 61 ಬಾಲ್‌ನಲ್ಲಿ 13 ಪೋರ್ ಹಾಗೂ 1 ಸಿಕ್ಸ್ ಬಾರಿಸಿ ಆರ್‌ಸಿಬಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಸಕ್ತ ಸಾಲಿನಲ್ಲಿ ಎರಡನೇ ಶತಕ ಗಳಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎನ್ನಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!