ಮತ್ತೆ ಎಡವಿದ ಆರ್‌ಸಿಬಿ: ಯುಪಿ ವಿರುದ್ಧ 138 ರನ್‌ಗೆ ಆಲೌಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

WPL 2023 ಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಮೊದಲ ಗೆಲುವಿನ ವಿಶ್ವಾಸದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಬ್ಯಾಟಿಂಗ್ ಇಳಿದಿದ್ದು, 19.3 ಓವರ್‌ನಲ್ಲಿ 138ರನ್‌ಗೆ ಆಲೌಟ್ ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಸ್ಮೃತಿ ಮಂಧನಾ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. 29 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಆರ್‌ಸಿಬಿ ವುಮೆನ್ಸ್ ತಂಡಕ್ಕೆ ಸೋಫಿಯಾ ಡಿವೈನ್ ಹಾಗೂ ಎಲ್ಲಿಸ್ ಪೆರಿ ಜೊತೆಯಾಟ ನೆರವಾಯಿತು.

ಸೋಫಿಯಾ ಡಿವೈನ್ 24 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. ಇತ್ತಎಲ್ಲಿಸ್ ಪೆರಿ ದಿಟ್ಟ ಹೋರಾಟ ನೀಡುವ ಮೂಲಕ ಆರ್‌ಸಿಬಿ ಕುಸಿತ ತಪ್ಪಿಸಿದರು. ಎಲ್ಲಿಸ್ ಪೆರಿ ಹೋರಾಟ ನೀಡಿದರೆ, ಇತರರಿಂದ ಯಾವ ಹೋರಾಟ ಮೂಡಿ ಬರಲಿಲ್ಲ. ಕಾನಿಕಾ ಅಹುಜಾ, ಹೀಥರ್ ನೈಟ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಶ್ರೇಯಾಂಕ ಪಾಟೀಲ್ ಜೊತೆ ಸೇರಿದ ಎಲ್ಲಿಸ್ ಪೆರಿ ಯುಪಿ ವಿರುದ್ದ ದಿಟ್ಟ ಹೋರಾಟ ನೀಡಿದರು.

ಎಲ್ಲಿಸ್ ಪೇರಿ 52 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಾಂಕ ಪಾಟೀಲ್ 15 ರನ್ ಸಿಡಿಸಿ ಔಟಾದರು. ಎರಿನ್ ಬರ್ನ್ 12 ರನ್ ಸಿಡಿಸಿದರು. ರಿಚಾ ಘೋಷ್ 1, ಕೋಮಲ್ ಜಂಜಾದ್ 5, ರೇಣುಕಾ ಠಾಕೂರ್ ಸಿಂಗ್ 3 ರನ್ ಸಿಡಿಸಿ ಔಟಾದರು. ಈ ಮೂಲಕ 19.3 ಓವರ್‌ನಲ್ಲಿ 138ರನ್‌ಗೆ ಆಲೌಟ್ ಆಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!