ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿರಾಜ್ ಹಾಗೂ ಕೃಷ್ಣ ಮಾರಕ ಬೌಲಿಂಗ್ ದಾಳಿಗೆ ತವರಿನಲ್ಲೇ ಆರ್‌ಸಿಬಿ ಎಡವಿದ್ದು, ಗುಜರಾತ್ ಟೈಟಾನ್ಸ್ ಕೇವಲ 170 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿ 2ನೇ ಓವರ್ನಲ್ಲಿ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಅದ್ರ ಬೆನ್ನಲ್ಲೇ ಪಿಲಿಫ್ ಸಾಲ್ಟ್ 14 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಕೇವಲ 4 ರನ್ ಸಿಡಿಸಿದರು. ನಾಯಕ ರಜತ್ ಪಾಟೀದಾರ್ 12 ರನ್ ಸಿಡಿಸಿ ಔಟಾದರು. 42 ರನ್‌ಗೆ ಆರ್‌ಸಿಬಿ 4 ವಿಕೆಟ್ ಕಳೆದುಕೊಂಡಿತ್ತು.
ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಜೊತೆಯಾಟದಿಂದ ಆರ್‌ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಹೊರಬಂತು. ಜಿತೇಶ್ ಶರ್ಮಾ 33 ರನ್ ಸಿಡಿಸಿದರು. ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ಮುಂದುವರಿಸಿದರೆ, ಕ್ರುನಾಲ್ ಪಾಂಡ್ಯ ಅಬ್ಬರಸಿಲಿಲ್ಲ. 5 ರನ್ ಸಿಡಿಸಿ ನಿರ್ಗಮಿಸಿದರು.
ಲಿಯಾಮ್ ಲಿವಿಂಗ್ ಸ್ಟೋನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಟಿಮ್ ಡೇವಿಡ್ 32 ರನ್ ಸಿಡಿಸಿದರು. ಈ ಮೂಲಕ 169 ರನ್ ಸಿಡಿಸಿತು.