Tuesday, July 5, 2022

Latest Posts

ಕೋಲ್ಕತಾ ವಿರುದ್ಧ 38 ರನ್ ಗಳ ಗೆಲುವು ಸಾಧಿಸಿದ ಆರ್‌ಸಿಬಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 38 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಪೇರಿಸಿತ್ತು. ಆರ್‌ಸಿಬಿ ನೀಡಿದ 205 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಪೇರಿಸಿದೆ.
ಕೋಲ್ಕತ್ತಾ ಪರ ನಿತೀಶ್ ರಾಣಾ 18, ಶುಭ್ಮನ್ ಗಿಲ್ 21, ರಾಹುಲ್ ತ್ರಿಪಾಠಿ 25, ಇಯಾನ್ ಮೋರ್ಗನ್ 29, ಶಕೀಬ್ ಅಲ್ ಹಸನ್ 26 ಮತ್ತು ಆಂಡ್ರೆ ರಸ್ಸೆಲ್ 31 ರನ್ ಬಾರಿಸಿದ್ದಾರೆ.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ 5 ರನ್, ದೇವದತ್ತ್ ಪಡಿಕ್ಕಲ್ 25, ಗ್ಲೇನ್ ಮ್ಯಾಕ್ಸ್ ವೆಲ್ 78 ಮತ್ತು ಡಿವಿಲಿಯರ್ಸ್ ಅಜೇಯ 76 ರನ್ ಬಾರಿಸಿದ್ದಾರೆ.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2, ಪ್ಯಾಟ್ ಕಮಿನ್ಸ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss