ಮಾವಿನೆಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರಲ್ಲಿ ವಿಟಮಿನ್ ಸಿ ಕೂಡ ಇದೆ. ಮಾವಿನೆಲೆಯಲ್ಲಿಚಹಾ ತಯಾರಿಸಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಅನ್ನು ನೀವು ಒದಗಿಸಬಹುದು. ವಿಟಮಿನ್ ಸಿ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಮಾವಿನ ಎಲೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಕೆಲಸದ ಒತ್ತಡ ಅಥವಾ ತಲೆನೋವಿನಿಂದ ನಿಮಗೆ ಕಿರಿಕಿರಿ ಎನಿಸಿದರೆ ಎರಡು ಹಿಡಿ ಮಾವಿನ ಎಲೆಗಳನ್ನು ನಿಮ್ಮ ಸ್ನಾನದ ನೀರಿಗೆ ಸೇರಿಸಿ. ಈ ನೀರಿನಿಂದ ಸ್ನಾನ ಮಾಡಿ. ಇದು ನಿಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ.
ಈ ಮಾವಿನ ಎಲೆ ಬಿಕ್ಕಳಿಕೆ ಮತ್ತು ಗಂಟಲಿನ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಮಾವಿನೆಲೆ ಅನ್ನು ಸುಟ್ಟು ಅದರ ಹೊಗೆಯನ್ನು ಮೂಗಿಗೆ ಎಳೆದುಕೊಳ್ಳಿ. ಇದು ಬಿಕ್ಕಳಿಕೆ ಮತ್ತು ಗಂಟಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.