ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಮನೆಯಲ್ಲಿದ್ದಾರೆ 180 ಮಂದಿ.. ಅಯ್ಯೋ! ಇದು ಹಾಸ್ಟೆಲ್ ಅಲ್ಲ ವಿಶ್ವದ ಅತೀ ದೊಡ್ಡ ಕುಟುಂಬ!

ಒಂದು ಹಾಸ್ಟೆಲ್ ನಡೆಸೋದು ಎಷ್ಟು ಕಷ್ಟ ಅಲ್ವಾ? ನಾರ್ಮಲ್ ಜನರಿಗೆ ಇದರ ಬಗ್ಗೆ ಐಡಿಯಾ ಇಲ್ಲ. ಇನ್ನೂರು ಜನಕ್ಕೆ ಎಷ್ಟು ರೂಂ ಬೇಕು. ಎಷ್ಟು ಕಬೋರ್ಡ್? ಬಾತ್‌ರೂಂ? ಬಟ್ಟೆಕಲ್ಲು? ಊಟ? ಕರೆಂಟ್? ತಲೆಕೆಡುತ್ತದೆ. ಆದರೆ ಮನೆಯಲ್ಲಿಯೇ 180 ಮಂದಿ ಇದ್ದರೆ?

ಇದೆಲ್ಲಾ ಅಸಾಧ್ಯ ಒಂದೇ ಮನೆಲೀ ಯಾಕೆ 180 ಜನ ಇರುತ್ತಾರೆ? ಅವರ ಮನೆಯಲ್ಲಿ ಮದುವೆನಾ? ಹೀಗೆ ಕೇಳಬಹುದು. ಆದರೆ 180 ಜನರ ತುಂಬು ಕುಟುಂಬವೊಂದಿದೆ ಅಂದರೆ ನಂಬ್ತೀರಾ?
ನಂಬಲೇಬೇಕು ವಿಶ್ವದ ಅತೀ ದೊಡ್ಡ ಫ್ಯಾಮಿಲಿ ಎಂದೇ ಹೆಸರಾಗಿದೆ ‘ಝಿಯೋನಾ ಚಾನಾರಾ’ ಕುಟುಂಬ. ಮಿಜೋರಾಮ್‌ನ ಭಕ್ತವಾಂಗ್ ಎನ್ನೋ ಜಾಗದಲ್ಲಿ ನಾಲ್ಕು ಫ್ಲೋರ್ ಮನೆಯಲ್ಲಿ ಈ ಕುಟುಂಬ ವಾಸವಿದೆ.

A view of the 100-room, four-story home of Ziona Chana, 67, the man with  the largest family in the world. Mr. Chana has 39 wives, 94 ch… | World,  Mizoram, New worldಇಷ್ಟು ದೊಡ್ಡ ಕುಟುಂಬ ಹೇಗೆ?: ಜಿಯೋನಾ ಅವರು ‘ಚಾನಸ್’ ಪಂಥಕ್ಕೆ ಬರುತ್ತಾರೆ. ಈ ಪಂಥದಲ್ಲಿ ಬಹುಪತ್ನಿತ್ವ ಆಚರಣೆಯಲ್ಲಿದೆ. ಈ ಪಂಥದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳಿವೆ. ಇವರೆಲ್ಲರೂ ಯೇಸುವನ್ನು
ನ್ನು ಆರಾಧಿಸುತ್ತಾರೆ. ಒಂದು ದಿನ ಯೇಸು ಜೊತೆ ಸೇರಿ ಇಡೀ ವಿಶ್ವವನ್ನೇ ಆಳುತ್ತೇವೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

Ziona Chana The worlds biggest family : The man with 39 wives, 94 children  and 33 grandchildren Slide 6-m.khaskhabar.comಝಿಯೋನ್‌ಗೆ ಪತ್ನಿಯರೆಷ್ಟು?: ಝಿಯೋನ್ ಅವರಿಗೆ 39 ಪತ್ನಿಯರು. 94 ಮಕ್ಕಳು, 14 ಸೊಸೆಯರು,33 ಮೊಮ್ಮಕ್ಕಳು. ಝಿಯೋನಾ ಒಂದೇ ವರ್ಷದಲ್ಲಿ ಹತ್ತು ಮದುವೆ ಆಗಿದ್ದರಂತೆ. ಈಗ ಝಿಯೋನಾಗೆ 74 ವರ್ಷ. ಈಗಲೂ ಮದುವೆಗಾಗಿ ವಧು ಹುಡುಕಾಟದಲ್ಲಿ ಇದ್ದಾರಂತೆ!

Wednesday, Feb. 23, 2011 - Quotes of the Day - TIME.comಇವರ ದಿನಚರಿ ಹೇಗೆ?: ಬೆಳಗ್ಗೆ 5:30ಕ್ಕೆ ಮನೆಯಲ್ಲಿ ಎಲ್ಲರೂ ಎದ್ದುಬಿಡುತ್ತಾರೆ. ಶಾಲೆಯಲ್ಲಿ ಪ್ರಯರ್‌ಗೆ ನಿಂತ ಹಾಗೆ ಅಂಗಳದಲ್ಲಿ ಎಲ್ಲರೂ ನಿಲ್ಲುತ್ತಾರೆ. ಸ್ಕೂಲ್‌ನಲ್ಲಿ ಹುಷಾರಿಲ್ಲ ಎಂದು ಪ್ರಯರ್ ತಪ್ಪಿಸುವ ಮಕ್ಕಳ ಹಾಗೆ ಇಲ್ಲಿಯೂ ಚಿಕ್ಕಮಕ್ಕಳು ನಿದ್ದೆಯಲ್ಲಿ ಪ್ರಯರ್ ತಪ್ಪಿಸುತ್ತಾರೆ. ಇದಾದ ನಂತರ ಆ ದಿನದ ಕೆಲಸವನ್ನು ಎಲ್ಲರಿಗೂ ಹಂಚಲಾಗುತ್ತದೆ.

World's Largest Family: Indian Sect Leader, Ziona Chana Has 39 Wives, 94  Children & 33 GrandKidsಬಿಗ್‌ಬಾಸ್ ಮನೆನಾ?: ಇದೊಂಥರಾ ಬಿಗ್‌ಬಾಸ್ ಮನೆಯನ್ನು ನೆನಪಿಸುತ್ತದೆ. ಮನೆಕೆಲಸ ಹಂಚುವುದು, ವಾರ ವಾರವೂ ಡಿಪಾರ್ಟ್‌ಮೆಂಟ್ ಬದಲಾಯಿಸುವುದು. ಬಿಗ್‌ಬಾಸ್ ಮನೆಯಲ್ಲಿ180 ಜನರನ್ನು ಹಾಕಿದರೆ ಹೇಗಿರುತ್ತದೋ ಹಾಗೆಯೇ ಇಲ್ಲಿ ಜೀವನ ನಡೆಯುತ್ತದೆ. ಇನ್ನು ಹೆಂಡತಿಯರೆಲ್ಲಾ ದೊಡ್ಡ ಹಾಲ್‌ನಲ್ಲಿ ಒಟ್ಟಿಗೇ ಮಲಗುತ್ತಾರೆ. ಊಟ ತಿಂಡಿಗೆ ಸಮಯ ನಿಗದಿ ಆಗಿರುತ್ತದೆ. ರಾತ್ರಿ ಒಂಬತ್ತು ಗಂಟೆಗೆಲ್ಲಾ ಲೈಟ್ಸ್ ಆಫ್!


ನೂರು ಕೆ.ಜಿ. ಅಕ್ಕಿ: ಝಿಯೋನಾ ಅವರ ಮನೆಯಲ್ಲಿ ಎಲ್ಲರಿಗೂ ಊಟಕ್ಕೆ ಬಡಿಸಲು ಪ್ರತಿದಿನವೂ ನೂರು ಕೆ.ಜಿ. ಅಕ್ಕಿ ಬೇಕಂತೆ. ಇನ್ನು 70 ಕೆ.ಜಿ ಆಲೂಗಡ್ಡೆ ದಿನವೂ ಬೇಕಂತೆ! ಸೆಪರೇಟ್ ಆದ ಹಾಲ್‌ನಲ್ಲಿಸೆಲ್ಫ್ ಸರ್ವೀಸ್ ಸಿಸ್ಟಮ್‌ನಲ್ಲಿ ಊಟ ಬಡಿಸಲಾಗುವುದು. ನೂರು ಕೆ.ಜಿ. ಅನ್ನ ಮಾಡಿ ಬಡಿಸುವವರ ಕಥೆ ಏನಾಗಬೇಡ!!

The Amazing World : Ziona Chana Family (The world's largest family),  Baktawng village, Mizoram, Indiaಇವರಿಂದಾಗಿ ಇವರ ಮನೆ ಕೂಡ ತುಂಬಾನೇ ಫೇಮಸ್ ಆಗಿದೆ. ಜನರು ಇವರ ಮನೆಯನ್ನು ಟೂರಿಸ್ಟ್ ಫ್ಲೇಸ್‌ನಂತೆ ನೋಡಿಕೊಂಡು ಹೋಗುತ್ತಾರೆ. ಒಂದು ದೊಡ್ಡ ಕುಟುಂಬ ಬದುಕಬೇಕಾದರೆ ಅನ್ಯೂನ್ಯತೆ ಮೊದಲ ಹೆಜ್ಜೆ. ತನ್ನ ಬಾಯ್‌ಫ್ರೆಂಡ್‌ಗೆ ಇನ್ನೊಬ್ಬರು ಕ್ರಶ್ ಎಂದರೆ ತಡೆದುಕೊಳ್ಳದ ಈ ಕಾಲದಲ್ಲಿ 39 ಪತ್ನಿಯರು ಒಂದೇ ಮನೆಯಲ್ಲಿ ಅನ್ಯೂನ್ಯವಾಗಿರುವುದನ್ನು ಗಮನಿಸಿದರೆ ಇವರ ಪ್ರೀತಿ ಮೆಚ್ಚಲೇಬೇಕು!

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss