spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಳೆ ಟೂತ್‌ ಬ್ರಶ್ ಏನ್‌ ಮಾಡ್ತೀರಾ? ಕಸದ ಬುಟ್ಟಿಗೆ ಹಾಕುವ ಮುನ್ನ ಇದನ್ನು ಓದಿ

- Advertisement -Nitte

ಹೆಚ್ಚು ಅಂದ್ರೆ ಟೂತ್‌ ಬ್ರಶ್‌ ಮೂರು ತಿಂಗಳು ಯೂಸ್‌ ಮಾಡಬಹುದು. ಆಮೇಲೆ ಬ್ರಶ್‌ ಪೊರಕೆ ತರ ಆಗಿರುತ್ತದೆ. ಅದರಿಂದಲೇ ಹಲ್ಲು ತಿಕ್ಕಿದ್ರೆ ಹಲ್ಲು ಕ್ಲೀನ್‌ ಆಗೋದಿಲ್ಲ. ಆಗ ಬ್ರಶ್‌ ಎಸೆದು ಡಸ್ಟ್‌ ಬಿನ್‌ಗೆ ಹಾಕ್ತೀರಾ.  ಆದರೆ ಇನ್ಮುಂದೆ ಹಾಳಾದ ಟೂತ್‌ ಬ್ರಶ್‌ ಎಸೆಯಬೇಡಿ. ಇದರಿಂದ ಸಾಕಷ್ಟು ಉಪಯೋಗ ಪಡೆಯಬಹುದು.

ಹಣಿಗೆ:
ಹಾಳಾಗಿರುವ ಟೂತ್‌ ಬ್ರಶ್‌ಗೆ ಪೇಸ್ಟ್‌ ಅಥವಾ ಸೋಪನ್ನು ಹಚ್ಚಿಕೊಂಡು ಗಲೀಜಾಗಿರುವ ಹಣಿಗೆಯನ್ನು ತೊಳೆಯಿರಿ. ಟೂತ್‌ ಬ್ರಶ್‌ನಿಂದ ತೊಳೆದರೆ ಹಣಿಗೆ ಬೇಗ ಕ್ಲೀನ್‌ ಆಗುತ್ತದೆ.


ಶೂ:
ಶೂ ಅಥವಾ ಚಪ್ಪಲಿ ಕೊಳೆ ತೆಗೆಯೋದಕ್ಕೆ ಕೂಡ ಟೂತ್‌ ಬ್ರಶ್‌ ಸಹಾಯಕಾರಿ. ಶೂ/ಚಪ್ಪಲಿ ಕೊಳಕಾಗಿದ್ದಾಗ ಟೂತ್‌ ಬ್ರಶ್‌ನಿಂದ ತೊಳೆಯಿರಿ. ಮೂಲೆಯಲ್ಲಿರುವ ಕೊಳೆ ಕೂಡ ಕ್ಲೀನ್‌ ಆಗುತ್ತದೆ.

ಐಬ್ರೋ, ಕೂದಲು:
ಐಬ್ರೋ, ಕೂದಲು ದಟ್ಟವಾಗಿಲ್ಲದವರು ಟೂತ್‌ ಬ್ರಶ್‌ಗೆ ಹರಳೆಣ್ಣೆ ಹಚ್ಚಿಕೊಂಡು ಐಬ್ರೋ, ಕೂದಲ ಮೇಲೆ ನಿಧಾನವಾಗಿ ಮಸಾಜ್‌ ಮಾಡಿಕೊಳ್ಳಿ. ಕೂದಲು ದಟ್ಟವಾಗಿ ಬೆಳೆಯುತ್ತದೆ.

ಆಭರಣ:
ಚಿನ್ನ, ಬಳ್ಳಿ ಆಭರಣ ಕೊಳೆಯಾಗಿದ್ದಾಗ ಟೂತ್‌ ಬ್ರಶ್‌ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು.

ಉಗುರು:
ಉಗುರಿನ ಸೈಡ್‌ನಲ್ಲಿ ಮತ್ತೆ ಉಗುರಿನ ಒಳ ಭಾಗವನ್ನು ಸ್ವಚ್ಛಗೊಳಿಸಲು ಸಹ ಟೂತ್‌ ಬ್ರಶ್‌ ಬಳಸಬಹುದು.

ಕೀ ಬೋಡ್:
ಕೀ‌ ಬೋರ್ಡ್ ಸ್ವಚ್ಛಗೊಳಿಸುವುದು ಸುಲಭವಲ್ಲ. ಧೂಳು ನಂಬರ್‌ ಮೂಲೆಗಳಲ್ಲಿ ಸೇರಿಕೊಂಡಿರುತ್ತದೆ. ಅದೇ ಟೂತ್‌ ಬ್ರಶ್‌ ನಿಂದಾದರೆ ಬಹುಬೇಗ ಸ್ವಚ್ಛಗೊಳಿಸಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss