Sunday, June 26, 2022

Latest Posts

ಸ್ಪರ್ಧೆಯಿಂದಲೇ ನಿರ್ಗಮಿಸಲಿದ್ದ ಪದಕವೀರನ ಕೈಹಿಡಿದ ಭಗವದ್ಗೀತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈಣ್ ಡೆಸ್ಕ್:

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನ ಟಿ-42ರ ಹೈಜಂಪ್ ನ ಕೊನೆಯ ಹಂತದಲ್ಲಿ ಭಾರತೀಯ ಆಟಗಾರ ಶರದ್ ಕುಮಾರ್ ಕೈ ಹಿಡಿದಿದ್ದು ಭಗವದ್ಗೀತೆ.

ಏನು ಹೇಳುತ್ತಿದ್ದೀನಿ ಅಂತ ಯೋಚನೆ ಮಾಡುತ್ತಿದ್ದೀರಾ? ಮೊಣಕಾಲಿನ ಸಮಸ್ಯೆ ಎದುರಾಗಿ ಒಲಂಪಿಕ್ಸ್ ನ ಹೈ ಜಂಪ್ ನ ಫಿನಾಲೆ ಹಂತದಿಂದ ಹೊರಗುಳಿಯ ಬೇಕಿದ್ದ ಶರದ್ ಕುಮಾರ್ ಮರಳಿ ಕ್ರೀಡಾಂಗಣದಲ್ಲಿ ಘರ್ಜಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಆದರೆ ಪಂದ್ಯದ ಹಿಂದಿನ ದಿನ ಕಾಲು ಉಳುಕಿಸಿಕೊಂಡು ವಿಪರೀತ ತೊಂದರೆಗೆ ಒಳಗಾಗಿದ್ದ ಶರದ್, ತಮಗೆ ಭಾಗವಹಿಸುವುದಕ್ಕೇ ಸಾಧ್ಯವಾಗದು ಎಂದು ಇಡೀ ರಾತ್ರಿ ಅತ್ತಿದ್ದರು. ಅದೇ ನೋವಿನಲ್ಲಿ ಮನೆಯವರೊಂದಿಗೆ ಮಾತನಾಡಿದಾಗ ಅವರ ತಂದೆ ಭಗವದ್ಗೀತೆ ಓದುವಂತೆ ಫೋನಿನಲ್ಲಿ ಸಲಹೆ ಕೊಟ್ಟರು.

ಭಗವದ್ಗೀತೆಯ ಕೆಲವು ಸಾಲುಗಳನ್ನು ಓದುತ್ತಲೇ ಮನಸ್ಸು ಸ್ಥಿಮಿತಕ್ಕೆ ಬಂತು, ಆತಂಕ ಕಡಿಮೆಯಾಯಿತು ಹಾಗೂ ಅದೇನೋ ಹೊಸ ಸ್ಫೂರ್ತಿ ಬಂತು ಎಂದು ಶರದ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಫಿನಾಲೆ ಸ್ಪರ್ಧೆಯ ಆತಂಕದಲ್ಲಿದ್ದ ನನಗೆ ಮೊಣಕಾಲು ನೋವು ಕಾಣಿಸಿಕೊಂಡಿದ್ದು, ರಾತ್ರಿ ಇಡೀ ನರಳಿದ್ದೇನೆ. ನನ್ನ ಕುಟುಂಬಸ್ಥರೊಂದಿಗೆ ಮಾತನಾಡಿಗೆ ತಾಯ್ನಾಡಿಗೆ ವಾಪಾಸಾಗುವ ಚಿಂತನೆ ನಡೆಸಿದ್ದೆ. ಆದರೆ ಶ್ರೀಕೃಷ್ಣ ಉಪದೇಶಿಸಿದ ಭಗವದ್ಗೀತೆ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಸಿದೆ ಎನ್ನುತ್ತಾರೆ ಶರದ್ ಕುಮಾರ್

ಶರದ್ 29 ವರ್ಷದ ಪಟ್ನಾ ಮೂಲದವರಾಗಿದ್ದು, ಒಲಂಪಿಕ್ಸ್ ನ ಫಿನಾಲೆಯಲ್ಲಿ 1.83 ಮೀ ಜಿಗಿಯುವ ಮೂಲಕ ಹೈ ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss