Sunday, July 3, 2022

Latest Posts

ಡಿಸೆಂಬರ್‌ನಲ್ಲಿ ಸಿನಿ ಪ್ರಿಯರಿಗೆ ಭರ್ಜರಿ ಹಬ್ಬ: ಓಟಿಟಿಯಲ್ಲಿ ಬಿಡುಗಡೆಗೆ ರೆಡಿಯಾಗಿವೆ‌ ಸಾಲು ಸಾಲು ಸಿನಿಮಾ, ಸೀರಿಯಲ್

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಡಿಸೆಂಬರ್‌ ತಿಂಗಳಿನಲ್ಲಿ ಸಿನಿಮಾ ಮತ್ತು ಸಿರೀಸ್‌ ಅಭಿಮಾನಿಗಳಿಗೆ ಓಟಿಟಿಯಲ್ಲಿ ಹಬ್ಬದೂಟ. ಏಕೆಂದ್ರೆ ವರ್ಷಾಂತ್ಯಕ್ಕೆ ಅನೇಕ ಸಿನಿಮಾ ಮತ್ತು ವೆಬ್​ ಸಿರೀಸ್​ಗಳು ಓಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ.

ಅಮೆಜಾನ್ ಪ್ರೈಮ್, ನೆಟ್​​ಫ್ಲಿಕ್ಸ್, ಆಹಾ, ಡಿಸ್ನೆ+ ಹಾಟ್​​ಸ್ಟಾರ್ ಮೊದಲಾದ ಒಟಿಟಿಗಳ ಮುಖಾಂತರ ಹಲವು ಚಿತ್ರಗಳು, ಸೀರೀಸ್ ತೆರೆಕಾಣುತ್ತಿವೆ.

ಯಾವೆಲ್ಲ ಸೀರಿಸ್‌, ಸಿನಿಮಾ?

ಅಭಿಷೇಕ್​ ಬಚ್ಚನ್​ ನಟನೆಯ ‘ಬಾಬ್​ ಬಿಸ್ವಾಸ್​’ ಸಿನಿಮಾ ಡಿ.3ರಂದು ಓಟಿಟಿ ಮೂಲಕ ಬಿಡುಗಡೆ ಆಗುತ್ತಿದೆ.
‘ಡಿಕಪಲ್ಡ್​’ ವೆಬ್​ ಸಿರೀಸ್​ ಡಿ.17ರಂದು ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಲಿದೆ.
ಅಕ್ಷಯ್​ ಕುಮಾರ್​, ಧನುಷ್​​, ಸಾರಾ ಅಲಿ ಖಾನ್​ ಅಭಿನಯದ ‘ಅತರಂಗಿ ರೇ’ ಚಿತ್ರ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಡಿ.24ರಂದು ಬಿಡುಗಡೆ.
ಖ್ಯಾತ ನಟಿ ರವೀನಾ ಟಂಡನ್ ಅವರ​ ‘ಅರಣ್ಯಕ್​’ ವೆಬ್​ ಸಿರೀಸ್​  ಡಿ.10ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss