Wednesday, August 17, 2022

Latest Posts

“ಗಡಿ ಭಾಗದಲ್ಲಿ ಶಾಂತಿ ಕದಡಲು ಸಂಚು ಹೂಡಿದರೆ ವಿಫಲಗೊಳಿಸಲು ಸಿದ್ಧ”

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೆರೆಹೊರೆಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನಾವು ಸಂಪೂರ್ಣವಾಗಿ ಅರಿತುಕೊಂಡಿದ್ದೇವೆ. ಗಡಿ ಭಾಗದಲ್ಲಿ ಶಾಂತಿಯನ್ನು ಕದಡಲು ಸಂಚು ಹೂಡಿದರೆ ಅದನ್ನು ವಿಫಲಗೊಳಿಸಲು ಸಿದ್ಧವಾಗಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಎಚ್ಚರಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ಅವರು ದೇಶಕ್ಕೆ ನೀಡಿದ ಸಂದೇಶದಲ್ಲಿ, ಕಾಶ್ಮೀರದ ಜನರಿಗೆ ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು.

ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಬಂದಿದೆ.  ಕಾಶ್ಮೀರ ಸಮಸ್ಯೆಗಳು ಬಗೆಹರಿಸದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಅಲ್ವಿ ಪುನರುಚ್ಛರಿಸಿದ್ದಾರೆ.

ಇಸ್ಲಾಮಾಬಾದ್ ನಲ್ಲಿ ನಡೆದ ರಕ್ಷಣಾ ದಿನ ಆಚರಣೆಯಲ್ಲಿ  31 ಬಂದೂಕು ವಂದನೆಯೊಂದಿಗೆ ಮತ್ತು ಪ್ರಾಂತೀಯ ರಾಜಧಾನಿಗಳಲ್ಲಿ 21- ಬಂದೂಕು ವಂದನೆಯೊಂದಿಗೆ ಆಚರಣೆ ಮಾಡಲಾಯಿತು ಎಂದು ಪಾಕಿಸ್ತಾನ ರೇಡಿಯೋ ವರದಿ ಮಾಡಿದೆ.

ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ಬೆಳಗ್ಗೆ ಇಸ್ಲಾಮಾಬಾದ್‌ನ ನೌಕಾ ಪ್ರಧಾನ ಕಚೇರಿಯಲ್ಲಿ  ಸಮಾರಂಭವನ್ನು ನಡೆಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!