Sunday, March 7, 2021

Latest Posts

ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧ: ಕೆ.ಎರ್ರಿಸ್ವಾಮೀ

ಹೊಸದಿಗಂತ ವರದಿ, ಬಳ್ಳಾರಿ:

ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಸರ್ಕಾರದ ಕ್ರಮ ಖಂಡಿಸಿ ಸಾಕಷ್ಟು ಹೋರಾಟಗಳನ್ನು ನಡೆಸಿ, ಸರ್ಕಾರಕ್ಕೂ ಮನವಿ ಸಲ್ಲಿಸಿದರೂ ಕ್ರಮವಿಲ್ಲ. ಈ ಕುರಿತು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿಯೂ ನ್ಯಾಯ ದೊರೆಯದಿದ್ದರೇ, ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಕೆ.ಎರ್ರಿಸ್ವಾಮೀ ಅವರು ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮೀತಿ ಸೇರಿದಂತೆ ನಮ್ಮ ಸಂಘಟನೆ ಆಶ್ರಯದಲ್ಲಿ ಸಾಕಷ್ಟು ಹೋರಾಟಗಳನ್ನು ನಡೆಸಿದರೂ ಕ್ರಮವಿಲ್ಲ, ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಕಾಲವಕಾಶ ನೀಡಿತ್ತು. ಈ ವೇಳೆ ಸಂಘಟನೆ ಸೇರಿದಂತೆ ಹೋರಾಟ ಸಮೀತಿ ಆಶ್ರಯದಲ್ಲಿ ನಡೆದ ಆಕ್ಷೇಪಣೆ ಸಲ್ಲಿಸುವ ಪ್ರಕ್ರೀಯೆಯಲ್ಲಿ ಲಕ್ಷಾಂತರ ಜನರು ಸರ್ಕಾರ ಅರ್ಜಿ ಸಲ್ಲಿಸುವ ಮೂಲಕ ಜಿಲ್ಲೆ ವಿಭಜನೆಯನ್ನು ವಿರೋಧಿಸಿದ್ದಾರೆ.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಏಕಾ ಏಕಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವ ಕುರಿತು ವಿಚಾರಣೆ ನಡೆದಾಗ ಅರ್ಜಿದಾರರು ಇನ್ನೋಮ್ಮ ದಾವೆ ಹೂಡಲು ಅವಕಾಸವಿದೆ ಎಂದು ತಿಳಿಸಿದ್ದಾರೆ, ಇದು ನಮಗೆ ಮೊದಲ ಜಯ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಮಾ.5 ರಂದು ಮತ್ತೆ ಜಿಲ್ಲೆ ಇಬ್ಭಾಗ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುವುದು, ಇಲ್ಲಿಯೂ ನ್ಯಾಯ ದೊರೆಯದಿದ್ದರೇ ಸುಪ್ರೀಂಕೋರ್ಟ್ ಕದ ತಟ್ಟಲು ಸಿದ್ಧನಿರುವೆ, ಯಾವುದೇ ಕಾರಣಕ್ಕೂ ಈ ನ್ಯಾಯಯುತ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ಜಿಲ್ಲೆ ವಿಭಜನೆಯಿಂದ ಈಶಾನ್ಯ ಕ್ಷೇತ್ರದ ತಾಲೂಕುಗಳು ಅಭಿವೃದ್ದಿಯಾಗಲಿವೆ, ಡಿಎಂಎಫ್ ಫಂಡ್ ಸಾಕಷ್ಟಿದೆ, ಜನರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಶುದ್ದ ಸುಳ್ಳು, ಡಿಎಂಎಫ್ ಫಂಡ್ ಬಳಸಲು ಹೊಸಪೇಟೆ ಹೊರತುಪಡಿಸಿ ಪಶ್ಚಿಮ ತಾಲೂಕುಗಳಲ್ಲಿ ಬಳಕೆ ಮಾಡಲು ಅವಕಾಶವಿಲ್ಲ. ಶೇ.100 ರಷ್ಟು ಅನುದಾನದಲ್ಲಿ ಹೊಸಪೇಟೆ ತಾಲೂಕಿಗೆ ಇರುವ ಅನುದಾನದಲ್ಲಿ ಶೇ.15ರಷ್ಟು‌ಮಾತ್ರ ಬಳಸಲು ಅನುಮತಿಯಿದೆ. ಉಳಿದಿದ್ದು, ಬಳಕೆ ಮಾಡಲು ಅವಕಾಶವಿಲ್ಲ, ಎಲ್ಲವೂ ಬಳ್ಳಾರಿ, ಸಂಡೂರು ಸೇರಿ‌ವ್ಯಾಪ್ತಿಯಲ್ಲಿ ಬಳಕೆ ಮಾಡಲು ಅವಕಾಶವಿದೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆ ಅಖಂಡವಾಗಿಯೇ ಉಳಿಯಬೇಕು, ಜಿಲ್ಲೆ‌ ಮಾಡುವದಿದ್ದರೇ ಹೋಸಪೇಟೆಯನ್ನೇ ಜಿಲ್ಲಾ ಕೇಂದ್ರವನ್ನಾಗಿ ‌ಮಾಡಲಿ, ಅದಕ್ಕೇ ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಲಿ, ಆದರೇ, ಜಿಲ್ಲೆಯನ್ನು‌ ವಿಭಜಿಸಲು ನಮ್ಮ ಸಂಪೂರ್ಣ ವಿರೋಧವಿದೆ. ಜನರ ಸಹಕಾರದಿಂದ ಈ ಹೋರಾಟದಿಂದ‌ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಮುಖಂಡರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss