Wednesday, July 6, 2022

Latest Posts

ವಾಸ್ತವದ ಬಗ್ಗೆ ಅರಿತು ನಮ್ಮ ಪಾದವನ್ನು ನೆಲದ ಮೇಲೇ ಇಟ್ಟುಕೊಳ್ಳಬೇಕು: ರಾಹುಲ್​ ದ್ರಾವಿಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿವೀಸ್ ವಿರುದ್ಧ 3-0ಯಲ್ಲಿ ಟಿ20 ಸರಣಿ ವಶಪಡಿಸಿಕೊಂಡಿರುವರ ಟೀಮ್ ಇಂಡಿಯಾದ ಆಟಗಾರ ಪ್ರದರ್ಶನಕ್ಕೆ ಕೋಚ್ ರಾಹುಲ್​ ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾಹುಲ್​ ದ್ರಾವಿಡ್​ ಕೋಚ್​ ಆಗಿ ಮತ್ತು ರೋಹಿತ್ ನಾಯಕನಾಗಿ ತಮ್ಮ ಮೊದಲ ಸರಣಿ ಗೆದ್ದಿರುವುದು ಇಬ್ಬರಿಗೂ ಉತ್ತಮ ಆರಂಭವಾಗಿದೆ.
ಈ ಕುರಿತು ಮಾತನಾಡಿದ ದ್ರಾವಿಡ್, ಕಠಿಣ ಪರಿಸ್ಥಿತಿಯಲ್ಲಿ ಕಿವೀಸ್​ ಈ ಸರಣಿಯನ್ನಾಡಿರುವುದನ್ನ ಅರಿವ ನಮ್ಮ ಕಾಲನ್ನು ನೆಲದ ಮೇಲೆ ಇರುವಂತೆ ನೋಡಿಕೊಳ್ಳಿ ಎಂದು ತಂಡಕ್ಕೆ ಸೂಚಿಸಿದ್ದಾರೆ.
6 ದಿನದ ಅಂತರದಲ್ಲಿ 3 ಪಂದ್ಯಗಳನ್ನಾಡಿರುವುದಕ್ಕೆ ದ್ರಾವಿಡ್​ ಆಟಗಾರರಿಗೆ ಹೆಚ್ಚು ಸಂಭ್ರಮಿಸದಿರಲು ಹೇಳಿದ್ದಾರೆ.
ಇದೊಂದು ಒಳ್ಳೆಯ ಸರಣಿ ಜಯ. ಪ್ರತಿಯೊಬ್ಬ ಆಟಗಾರರು ಸರಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ನಾವು ವಾಸ್ತವದ ಬಗ್ಗೆಯೂ ಅರಿತುಕೊಳ್ಳಬೇಕು ಮತ್ತು ನಮ್ಮ ಪಾದವನ್ನು ನೆಲದ ಮೇಲೇ ಇಟ್ಟುಕೊಳ್ಳಬೇಕು. ಏಕೆಂದರೆ ಟಿ20 ವಿಶ್ವಕಪ್ ಮುಗಿದು ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತು ಕೇವಲ 6 ದಿನಗಳಲ್ಲಿ ಮೂರು ಸರಣಿ ಆಡುವುದು ಸುಲಭವಲ್ಲ ಎಂದು ಸರಣಿ ಮುಗಿದ ಬಳಿಕ ದ್ರಾವಿಡ್​ ಹೇಳಿದ್ದಾರೆ.
ನಮ್ಮ ದೃಷ್ಟಿಕೋನದಿಂದ ಈ ಸರಣಿ ತುಂಬಾ ಚೆನ್ನಾಗಿತ್ತು. ನಾವು ಸಾಕಷ್ಟು ಕಲಿತಿದ್ದೇವೆ ಹಾಗೂ ಅದರೊಂದಿಗೆ ಮುಂದುವರಿಯಬೇಕಿದೆ. ಮುಂದಿನ 10 ತಿಂಗಳಲ್ಲಿ ನಮ್ಮ ಮುಂದೆ ದೀರ್ಘವಾದ ಪಯಣವಿದೆ. ಸಾಕಷ್ಟು ಏರಿಳಿತಗಳನ್ನು ಸಮನಾಗಿ ಹಂಚಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ವಿಶ್ರಾಂತಿಯಲ್ಲಿರುವ ಖಾಯಂ ಆಟಗಾರರು ತಂಡವನ್ನು ಸೇರಿಕೊಂಡರೆ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಲಿದೆ. ಆದರೆ ನಾವು ಸಾಕಷ್ಟು ಆಯ್ಕೆಗಳನ್ನು ಹೊಂದಿರುವುದು ನಿಜಕ್ಕೂ ಒಳ್ಳೆಯ ವಿಷಯ. ಇಲ್ಲಿಂದ ಮುಂದಿನ ವಿಶ್ವಕಪ್​ವರೆಗೆ ನಾವು ದೀರ್ಘವಾದ ಆವೃತ್ತಿಯನ್ನು ಹೊಂದಿದ್ದೇವೆ. ಹಾಗಾಗಿ ನಾವು ವಿವಿಧ ಸ್ಥಳಕ್ಕೆ ತಕ್ಕಂತೆ ಆಟಗಾರರನ್ನು ಬದಲಾಯಿಸಿಕೊಳ್ಳಬಹುದು ಎಂದು ಮುಖ್ಯ ಕೋಚ್​ ದ್ರಾವಿಡ್​ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss