Sunday, August 14, 2022

Latest Posts

ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುವ ಬಂಜೆತನಕ್ಕೆ ಈ ಅಭ್ಯಾಸಗಳೇ ಕಾರಣ…

ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುವ ಸಮಸ್ಯೆಗಳಲ್ಲಿ ಬಂಜೆತನ ಮುಖ್ಯವಾದ್ದು. ಮಕ್ಕಳಾಗಲಿಲ್ಲ, ಮುಂದಿನ ಆಪ್ಷನ್ಸ್ ಏನು ಎಂದು ದಂಪತಿ ಆಲೋಚಿಸಿದರೂ ಸಮಾಜ ಮುಂದುವರಿಯಲು ಬಿಡುವುದಿಲ್ಲ. ಬೇರೆಯವರ ಮಕ್ಕಳನ್ನು ಮುಟ್ಟಲು ಬಿಡದೇ ಇರುವುದು, ನಾಮಕರಣಕ್ಕೆ ಕರೆಯದಿರುವುದು, ಈ ರೀತಿ ಸಮಸ್ಯೆ ಎದುರಾಗುತ್ತದೆ. ಬಂಜೆತನಕ್ಕೆ ಕಾರಣ ಏನು? ಈ ಕಾರಣಗಳು ಇರಬಹುದು..

  1. ಯೂಟೆರಸ್‌ನಲ್ಲಿ ಸಮಸ್ಯೆ
  2. ಫ್ಯಾಲೋಪಿಯನ್ ಟ್ಯೂಬ್‌ಗಳ ಸಮಸ್ಯೆ
  3. ಓವ್ಯುಲೇಶನ್ ಸರಿಯಾಗ ಆಗದಿರುವುದು.
  4. ಮೊಟ್ಟೆಗಳ ಸಂಖ್ಯೆಯಲ್ಲಿ ಕಡಿತ ಅಥವಾ ಕ್ವಾಲಿಟಿ ಇಲ್ಲದಿರುವುದು.
  5. ವಯಸ್ಸು
  6. ಓವ್ಯುಲೇಶನ್ ತಡೆಯುವ ಹಾರ್ಮೋನ್‌ಗಳ ಸಂಖ್ಯೆ ಹೆಚ್ಚಾಗುವುದು.
  7. ಸರಿಯಾದ ಪಿರಿಯಡ್ ಸೈಕಲ್ ಇಲ್ಲದಿರುವುದು.
  8. ಸ್ಥೂಲಕಾಯ
  9. ಅತಿ ಕಡಿಮೆ ತೂಕ ಇರುವುದು.
  10. ಅತಿಯಾಗಿ ವ್ಯಾಯಾಮ ಮಾಡಿ, ದೇಹದಲ್ಲಿ ಸ್ವಲ್ಪವೂ ಫ್ಯಾಟ್ ಇಲ್ಲದಿರುವುದು.
  11. ಟ್ಯೂಮರ್
  12. ಅಸುರಕ್ಷಿತ ಲೈಂಗಿಕತೆಯಿಂದ ಬಂದ ಸಮಸ್ಯೆ
  13. ಅತಿಯಾಗಿ ಧೂಮಪಾನ, ಮದ್ಯಪಾನ

    ಇವೆಲ್ಲವೂ ಬಂಜೆತನಕ್ಕೆ ಕಾರಣ ಇರಬಹುದು. ಆದರೆ ಇವುಗಳಲ್ಲಿ ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ಶೀಘ್ರವೇ ವೈದ್ಯರನ್ನು ಭೇಟಿ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss