Wednesday, August 10, 2022

Latest Posts

ಈಗಲೇ ಮದುವೆ ಬೇಡ ಅನ್ನೋದಕ್ಕೆ ಈ ಕಾರಣಗಳನ್ನು ಕೊಡ್ತಾರೆ ಹುಡುಗೀರು!

ಈ ಹಿಂದೆ ಹುಡುಗಿ ಶಾಲೆ ಮುಗಿಸಿದರೆ ಮದುವೆ ಮಾಡುವುದೊಂದೇ ಗುರಿಯಾಗಿತ್ತು. ಮನೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿದರೆ ಅವರ ಮದುವೆಯೇ ದೊಡ್ಡ ಸವಾಲು, ಅವರ ಸುರಕ್ಷತೆ ಕೆಲವು ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಈಗೆಲ್ಲಾ ಹಾಗಿಲ್ಲ, ಹುಡುಗಿಯರು ತಾವು ಮದುವೆಯಾಗುವ ವಯಸ್ಸು, ಹುಡುಗ ಎಲ್ಲವನ್ನೂ ಅವರೇ ಹುಡುಕುತ್ತಾರೆ. ಮನೆಯಲ್ಲಿ ಎಷ್ಟೇ ಹೇಳಿದರೂ ಬೇಗ ಮದುವೆಯಾಗಲು ಒಪ್ಪುವುದಿಲ್ಲ. ಮದುವೆ ಮುಂದೂಡೋಕೆ ಅವರು ಕೊಡೋ ಕಾರಣಗಳಿವು..

  • ಡಬಲ್ ಡಿಗ್ರಿ, ಕೋರ್ಸ್‌ಗಳನ್ನು ಮಾಡುವ ಹಂಬಲ.
  • ಕೆಲಸಕ್ಕೆ ಸೇರುವವರೆಗೂ ಮದುವೆ ಇಷ್ಟವಿಲ್ಲ.
  • ಕೆಲಸಕ್ಕೆ ಸೇರಿದ ನಂತರ ಸ್ವಲ್ಪ ಸಮಯ ಎಂಜಾಯ್ ಮಾಡಬೇಕು.
  • ನನ್ನ ಸ್ನೇಹಿತೆಯರಿಗೂ ಇನ್ನೂ ಮದುವೆಯಾಗಿಲ್ಲ.
  • ಜೀವನದಲ್ಲಿ ಕೆಲವು ಮೈಲುಗಲ್ಲು ಸಾಧಿಸಬೇಕು.
  • ಮದುವೆಯ ಬಗ್ಗೆಯೇ ಆಸಕ್ತಿ ಇಲ್ಲ.
  • ಸೂಕ್ತ ವರ ಸಿಗುವುದಿಲ್ಲ.
  • ಜಾತಿಯ ಚೌಕಟ್ಟಿನಲ್ಲಿ ಮದುವೆಯಾಗಲು ಇಷ್ಟವಿಲ್ಲ.
  • ಇಷ್ಟಪಟ್ಟ ಹುಡುಗನಿದ್ದಾನೆ, ನಿಧಾನವಾಗಿ ಮದುವೆ ಆಗುತ್ತೇವೆ.
  • ಮದುವೆಗೆ ಖರ್ಚಾಗುವಷ್ಟು ಹಣ ಸಂಪಾದಿಸಬೇಕು.
  • ಮದುವೆಯಲ್ಲಿ ಮೋಸವಾಗುವ ಭಯ
  • ಒಳ್ಳೆ ಹುಡುಗ ಸಿಗದೇ ಹೋದರೆ ಎನ್ನುವ ಸಂದೇಹ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss