ರೆಬಲ್ ಸ್ಟಾರ್ ಅಂಬರೀಶ್​ ಅಭಿನಯದ ‘ಅಂತ’ ಸಿನಿಮಾ ರಿ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡ ಚಿತ್ರರಂಗದಲ್ಲಿ ನೇರ ಮಾತುಗಳಿಂದಲೇ ಜನರ ಮನಗೆದ್ದ ರೆಬಲ್ ಸ್ಟಾರ್ ಅಂಬರೀಶ್‌ ಅಭಿನಯದ ʼಅಂತʼ ಸಿನಿಮಾ ಮರು ಬಿಡುಗಡೆಗೆ ಸಜ್ಜಾಗಿದೆ. ಮಂಡ್ಯದ ಗಂಡು ಬದುಕಿದ್ದರೆ ಇದೇ ಮೇ ತಿಂಗಳು 29ಕ್ಕೆ 71ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಷ್ ಸಿನಿಮಾ ಕೆರಿಯರ್​ನಲ್ಲಿ ಹೆಚ್ಚು ಖ್ಯಾತಿ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಚಿತ್ರ ಮರು ಬಿಡುಗಡೆಯಾಗುತ್ತಿದೆ.

ʼಅಂತʼ ಸಿನಿಮಾ ರಿಲೀಸ್ ಆಗಿ ಇದೀಗ 42 ವರ್ಷಗಳೇ ಕಳೆದಿವೆ. ಆದರೂ ಈ ಸಿನಿಮಾದ ಕ್ರೇಜ್ ಇನ್ನು ಹಾಗೇ ಇದೆ. ಅಂಬರೀಶ್ ಸಿನಿ ಜೀವನದಲ್ಲಿ ಈ ಸಿನಿಮಾ ತುಂಬಾ ವಿಶೇಷವಾಗಿಯೇ ಇದೆ.

ಇದೇ ತಿಂಗಳ ಮೇ 26 ರಂದು ಅಂತ ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!