RECIPE| ಬಾಯಲ್ಲಿ ನೀರೂರುತ್ತೆ ಆಲೂ ಬಟಾಣಿ ಮಸಾಲ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇವತ್ತು ನಾವು ಡಾಬಾ ಶೈಲಿಯಲ್ಲಿ ಆಲೂ-ಬಾಟಾಣಿ ಮಸಾಲ ಮಾಡುವ ವಿಧಾನವನ್ನು ತಿಳಿಸುತ್ತೇವೆ. ಈ ಗ್ರೇವಿಯನ್ನು  ಅತಿ ಸುಲಭವಾಗಿ ತಯಾರಿಕೊಳ್ಳಬಹುದು.  ಚಪಾತಿ, ದೋಸೆ ಮತ್ತು ಅನ್ನದೊಂದಿಗೆ ಸವಿಯಬಹುದು.

ಬೇಕಾಗುವ ಸಾಮಾಗ್ರಿ:

ಸಾಮಾಗ್ರಿಗಳು ಎಣ್ಣೆ – 2 ಚಮಚ, ಜೀರಿಗೆ – 1/2 ಚಮಚ,  ಈರುಳ್ಳಿ – 3/4 ಕಪ್ (ಕತ್ತರಿಸಿದ್ದು), ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 2 ಚಮಚ, ಹಸಿಮೆಣಸಿನ ಪೇಸ್ಟ್ – 1 ಚಮಚ, ಟೊಮೇಟೊ – 1 ಕಪ್, ನೀರು ಬೇಕಾದಷ್ಟು, ಬಟಾಣಿ – 1 ಕಪ್, ಆಲೂಗಡ್ಡೆ – 1 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಹುಡಿ – 1 1/2 ಚಮಚ, ಗರಂ ಮಸಾಲಾ – 1/2 ಚಮಚ, ಅರಿಶಿನ – ಚಿಟಿಕೆಯಷ್ಟು, ಕರಿಬೇವಿನೆಸಳು – 1 ಚಮಚ (ಕತ್ತರಿಸಿದ್ದು).

ಮಾಡುವ ವಿಧಾನ:

ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆಯನ್ನು ಹಾಕಿ, ಅದು ಸಿಡಿಯುತ್ತಿದ್ದಂತೆ, ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಈರುಳ್ಳಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಮತ್ತು ಹಸಿಮೆಣಸಿನ ಪೇಸ್ಟ್ ಅನ್ನು ಹಾಕಿ. ಟೊಮೇಟೊ ಬೇಯಲು ಇನ್ನೂ ಸಮಯ ಬೇಕು ಎಂದಾದಲ್ಲಿ ಸ್ವಲ್ಪ ನೀರನ್ನು ಹಾಕಿ. ಎಲ್ಲಾ ಮಸಾಲೆ ಪದಾರ್ಥಗಳು ಬೆಂದ ನಂತರ, ಬಟಾಣಿ ಮತ್ತು ಆಲೂಗಡ್ಡೆಯನ್ನು ಹಾಕಿ. ಬಳಿಕ ಉಪ್ಪು, ಕೆಂಪು ಮೆಣಸಿನ ಹುಡಿ, ಅರಿಶಿನ ಹುಡಿ ಮತ್ತು ಗರಂ ಮಸಾಲಾ ಹುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಬಳಿಕ ಒಂದು ಕಪ್‎ನಷ್ಟು ನೀರನ್ನು ಕರಿಯನ್ನು ಬೇಯಲು ಬಿಡಿ. ಆಲೂ ಬಟಾಣಿ ಸವಿಯಲು ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!