ತೂಕ ಇಳಿಕೆ ಹಾಗೂ ಎನರ್ಜಿ ಎರಡಕ್ಕೂ ಓಟ್ಸ್ ಸಹಕಾರಿ. ಓಟ್ಸ್ನಲ್ಲಿಯೇ ನೂರಾರು ರೆಸಿಪಿ ಮಾಡಬಹುದು. ಅದೇ ರೀತಿ ಇಂದು ಟೇಸ್ಟಿ ಹಾಗೂ ಹೆಲ್ತಿಯಾದ ಓಟ್ಸ್ ರೆಸಿಪಿ ಹೇಳಿಕೊಡುತ್ತೇವೆ. ಹೇಗೆ ಮಾಡೋದು ನೋಡಿ…
ಬೇಕಾಗಿರುವ ಸಾಮಾಗ್ರಿಗಳು
ಓಟ್ಸ್
ಹಾಲು
ಶಿಯಾ ಸೀಡ್ಸ್
ಜೇನುತುಪ್ಪ
ಸೇಬು
ಮಾಡುವ ವಿಧಾನ
ಮೊದಲು ಬೌಲ್ಗೆ ಓಟ್ಸ್, ಶಿಯಾ ಸೀಡ್ಸ್ ಹಾಕಿ
ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ರಾತ್ರಿಯಿಡೀ ಫ್ರಿಡ್ಜ್ನಲ್ಲಿಡಿ.
ಬೆಳಗ್ಗೆ ಇದಕ್ಕೆ ಜೇನುತುಪ್ಪ ಹಾಗೂ ನಿಮ್ಮಿಷ್ಟದ ಯಾವುದೇ ಹಣ್ಣು ಹಾಕಬಹುದು.
ರಾತ್ರಿಯಿಡೀ ನೆನೆಸಿರುವುದರಿಂದ ಓಟ್ಸ್ ತುಂಬಾನೇ ಟೇಸಿಯಾಗಿರುತ್ತದೆ.