ಮನೆಯಲ್ಲಿ ಸಂಜೆ ಇದ್ದರೆ ಏನಾದರೂ ತಿನ್ನೋಣ ಎನಿಸುತ್ತದೆ. ಅದರಲ್ಲೂ ಮಕ್ಕಳಿದ್ದರೆ ಸ್ನಾಕ್ಸ್ ಬೇಕೇ ಬೇಕು.
ಹೊರಗಿನ ಅನ್ಹೆಲ್ತಿ ಸ್ನಾಕ್ಸ್ ತಿನ್ನಲು ಬಿಡಬೇಡಿ.ಮನೆಯಲ್ಲಿಯೇ ರುಚಿಯಾದ ಕೋಡುಬಳೆ ಮಾಡಿ. ಇದನ್ನು ಹದಿನೈದು ದಿನದವರೆಗೆ ಸ್ಟೋರ್ ಮಾಡಿ ಇಡಬಹುದು. ಚಕ್ಕಲಿ ಮಾಡುವ ಹೊರಳು ಇಲ್ಲ ಎಂದರೆ ಈ ರೀತಿ ಕೋಡುಬಳೆ ಮಾಡಿ ಇಟ್ಟುಬಿಡಿ. ಹೇಗೆ ಮಾಡೋದು ನೋಡಿ..
ಸಾಮಾಗ್ರಿಗಳು
ಅಕ್ಕಿ ಹಿಟ್ಟು
ಸೂಜಿ ರವೆ
ಉಪ್ಪು
ಮೈದಾ
ಅಜ್ವೈನ್
ಹಿಂಗ್
ಎಣ್ಣೆ
ಕಾಯಿ ತುರಿ
ಜೀರಿಗೆ
ಖಾರದಪುಡಿ
ಮಾಡುವ ವಿಧಾನ
ಮೊದಲು ಅಕ್ಕಿ ಹಿಟ್ಟು, ಸೂಜಿ ರವೆ, ಮೈದಾ,ಉಪ್ಪು, ಓಂ ಕಾಳು, ಬಿಸಿ ಎಣ್ಣೆ, ಹಾಕಿ.
ನಂತರ ಮಿಕ್ಸಿಗೆ ಖಾರದಪುಡಿ,ಕಾಯಿ,ಜೀರಿಗೆ ಹಾಕಿ ರುಬ್ಬಿ.
ಈ ಮಿಶ್ರಣವನ್ನು ಅಕ್ಕಿ ಹಿಟ್ಟಿಗೆ ಹಾಕಿ.
ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಬಿಸಿ ಎಣ್ಣೆಗೆ ಕೋಡುಬಳೆ ಆಕಾರಕ್ಕೆ ತಂದು ಹಾಕಿ ರೋಸ್ಟ್ ಮಾಡಿ.
ಸ್ವಲ್ಪ ತಣ್ಣಗಾದರೆ ಗರಿಗರಿ ಕೋಡುಬಳೆ ರೆಡಿ.