spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಂಪ್ರದಾಯಕ ಸಿಹಿತಿಂಡಿ ಒತ್ತುಶಾವಿಗೆ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ…

- Advertisement -Nitte

ಒತ್ತು ಶಾವಿಗೆ ನಮ್ಮ ಸಾಂಪ್ರದಾಯಿಕ ಅಡುಗೆ. ಆದರೆ ಇದೀಗ ಬೇರೆ ಬೇರೆ ಸಿಹಿತಿನಿಸುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ. ಆದರೆ ಗಣಪತಿ ಹಬ್ಬದಲ್ಲಿ ಒತ್ತು ಶಾವಿಗೆ ಮುಖ್ಯವಾದ ಸಿಹಿ ತಿಂಡಿ ಇದನ್ನು ಮಾಡೋದು ಸುಲಭ. ಹಾಗೂ ಹೆಚ್ಚು ಸಿಹಿ ಕೂಡ ಇರೋದಿಲ್ಲ. ಹೇಗೆ ಮಾಡೋದು ನೋಡಿ…

ಶಾವಿಗೆ ಮಾಡುವ ವಿಧಾನ
ಪಾತ್ರೆಗೆ ಬಿಸಿ ನೀರು ಹಾಕಿ.
ಅದು ಕುದ್ದ ನಂತರ ಮುದ್ದೆಗೆ ಹಾಕುವ ಹಾಗೆ ಅಕ್ಕಿ ಹಿಟ್ಟು ಹಾಕಿ ಬೇಯಿಸಿ.
ಬೆಂದ ನಂತರ ಮುದ್ದೆಯ ರೀತಿ ಅದನ್ನು ಚೆನ್ನಾಗ ಕಲಸಿ, ಉಂಡೆ ಮಾಡಿ ಇಟ್ಟುಕೊಳ್ಳಿ.
ನಂತರ ಚಕ್ಕುಲಿ ಹೊರಳಿನಲ್ಲಿ ಹಿಟ್ಟು ಹಾಕಿ, ಸಣ್ಣ ತೂತಿನಲ್ಲಿ ಶಾವಿಗೆ ಒತ್ತಿ.
ಇದನ್ನು ಒಣಗಲು ಬಿಡಿ.

ಪುಡಿ ಮಾಡುವ ವಿಧಾನ

ಮಿಕ್ಸಿಗೆ ಹುರಿಗಡ್ಲೆ, ಎಳ್ಳು ಹಾಕಿ ಪುಡಿ ಮಾಡಿ.

ಪಾನಕ ಮಾಡುವ ವಿಧಾನ

ಬೆಲ್ಲಕ್ಕೆ ನೀರು ಹಾಕಿ ಕರಗಿಸಿ ಪಾನಕ ಮಾಡಿ, ಏಲಕ್ಕಿ ಹಾಕಿ.
ಅಥವಾ ಕಾಯಿಹಾಲು ತೆಗೆದು ಅದಕ್ಕೆ ಬೆಲ್ಲದ ಪಾನಕ ಸೇರಿಸಬಹುದು.

ತಿನ್ನೋದು ಹೇಗೆ?

ಮೊದಲು ಶಾವಿಗೆ, ಅದರ ಮೇಲೆ ಪುಡಿ ನಂತರ ಸಿಹಿ ಹಾಲು ಹಾಕಿ ಕಲಸಿ ಬಿಸಿಬಿಸಿ ತಿನ್ನಬೇಕು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss